Friday, April 26, 2024
Homeಕರಾವಳಿಬಂಟ್ವಾಳದಲ್ಲಿ ವರ್ಕ್ ಶಾಪ್ ಮುಂದೆ ನಿಲ್ಲಿಸಿದ್ದ ಪಿಕ್ ಅಪ್ ಕಳವು  : ಮೂವರು ಆರೋಪಿಗಳನ್ನು ಬಂಧಿಸಿದ...

ಬಂಟ್ವಾಳದಲ್ಲಿ ವರ್ಕ್ ಶಾಪ್ ಮುಂದೆ ನಿಲ್ಲಿಸಿದ್ದ ಪಿಕ್ ಅಪ್ ಕಳವು  : ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

 ಬಂಟ್ವಾಳ : ಇಲ್ಲಿನ ಅಮ್ಟೂರು ಗ್ರಾಮದ ರಾಯಪ್ಪ ಕೊಡಿಯಲ್ಲಿರುವ ಅಪೊಲೋ ಎಲೆಕ್ಟ್ರಿಕಲ್ಸ್ ಸಂಸ್ಥೆಯ ವರ್ಕ್ ಶಾಪ್ ಮತ್ತು ದಾಸ್ತಾನು ಕೊಠಡಿಯು ಬಳಿ  ದಿನಾಂಕ 05.04.2022 ರಂದು ಸಂಜೆ 6 ಗಂಟೆ ಸುಮಾರಿಗೆ ಮಹೀಂದ್ರಾ ಬೊಲೆರೋ ಪಿಕ್ಅಪ್ (ವಾಹನ ಸಂಖ್ಯೆ: ಕೆಎ-19- ಎಬಿ-5366) ಅನ್ನು ನಿಲ್ಲಿಸಿ ಹೋಗಲಾಗಿತ್ತು. ವರ್ಕ್ ಶಾಪ್ ನ ಗೇಟಿನ ಬೀಗವನ್ನು ಅಲ್ಲಿಯೇ ವರ್ಕ್ ಶಾಪ್ ಪಕ್ಕದಲ್ಲಿ ಇರಿಸಿ ಹೋಗಿದರು . ದಿನಾಂಕ: 06.04.2022 ರಂದು ಬೆಳಿಗ್ಗೆ 09.00 ಗಂಟೆಗೆ ಮ್ಯಾನೇಜರ್ ವರ್ಕ್ ಶಾಪ್ ತೆರೆಯಲು ಹೋದ ಸಮಯ ಗೇಟಿನ ಬೀಗವು ತೆಗೆದಿದ್ದು, ಗೇಟಿನ ಒಳಗಡೆ ಹೋದಾಗ ಪಿಕ್ಅಪ್ ವಾಹನ ನಾಪತ್ತೆಯಾಗಿತ್ತು.

ಕೂಡಲೇ ಮಾಲೀಕರಾದ ಸುಲೈಮಾನ್ ರವರಿಗೆ ಮ್ಯಾನೇಜರ್ ಕರೆ ಮಾಡಿ ತಿಳಿಸಿದ್ದಾರೆ. ಹೋಗಿ ನೋಡಿದಾಗ ಹೋಗಿ ನೋಡಲಾಗಿ ಪಿಕ್ಅಪ್ ವಾಹನ ಹಾಗೂ  ವೆಲ್ಡಿಂಗ್ ಮಿಷನ್ ಸೇರಿದಂತೆ ಇತರೆ ವಸ್ತುಗಳು ಕಳವಾಗಿರೋದು ಬೆಳಕಿಗೆ ಬಂದಿದೆ. ಕೂಡಲೇ ಸುಲೈಮಾನ್ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದಾರೆ.

ಅದರಂತೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಲತೀಶ್ ಜೋಗಿ, ವಿಶ್ವನಾಥ್,  ರವಿಕಿರಣ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಆರೋಪಿಗಳಿಂದ ಕಳವಾಗಿದ್ದ ಪಿಕ್ ಅಪ್ ವಾಹನ,  ವೆಲ್ಡಿಂಗ್ ಮಿಷನ್ , ಒಂದು ಕಂಪ್ಯೂಟರ್ ಮಾನಿಟರ್ , ಡಿವಿಆರ್,  7020 ರೂಪಾಯಿ ನಗದು, ಕಳ್ಳತನಕ್ಕೆ ಬಳಸಿದ್ದ  ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!