Saturday, June 6, 2026
Homeಕರಾವಳಿಉಡುಪಿಉಡುಪಿ: ಮಾರಣಬಲೆ ಬಿಡಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಉಡುಪಿ: ಮಾರಣಬಲೆ ಬಿಡಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಉಡುಪಿ: ಮಾರಣಬಲೆ ಬಿಡಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪ ಸಮುದ್ರದಲ್ಲಿ ನಡೆದಿದೆ.ಭಾಸ್ಕರ ಪೂಜಾರಿ (55) ಮೃತ ವ್ಯಕ್ತಿ.

ಭಾಸ್ಕರ ಪೂಜಾರಿ ಪಾರಂಪಳ್ಳಿಯ ಮರಿನಾ ಮನೆ ಗೆಸ್ಟ್ ಹೌಸ್ ಸಮೀಪ ಸಮುದ್ರದಲ್ಲಿ ಬಿಟ್ಟಿದ್ದ ಮರಣಬಲೆಯನ್ನು ಮೇಲೇತ್ತಲು ಸಮುದ್ರಕ್ಕೆ ಇಳಿದಾಗ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದಾರೆ.ತಕ್ಷಣ ಮಲ್ಪೆ ಕರಾವಳಿ ಪೊಲೀಸ್ ಠಾಣೆಯ ಕೆ.ಎನ್.ಡಿ. ಸಿಬ್ಬಂದಿ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ಇವರು ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ದಡಕ್ಕೆ ತಂದು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಭಾಸ್ಕರ್ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ರಕ್ಷಣಾ ಪಡೆಯ ಶ್ರಮ ವ್ಯರ್ಥವಾದ ಬಗ್ಗೆ ಅತೀವ ಬೇಸರ ಉಂಟುಮಾಡಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!