Friday, October 4, 2024
Homeಕರಾವಳಿಬೆಳ್ತಂಗಡಿ; ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳ್ತಂಗಡಿ; ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

spot_img
- Advertisement -
- Advertisement -

ಬೆಳ್ತಂಗಡಿ; ವಿದ್ಯಾರ್ಥಿಗಳನ್ನೇ ಗುರಿಯಾಗಿಸಿರಿಕೊಂಡು ವ್ಯಸನಗಳನ್ನು ಬಿತ್ತುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಸಾಕಷ್ಟು ಎಚ್ಚರ ಮುಖ್ಯ. ವಿದ್ಯಾರ್ಥಿಗಳು ಈ ರೀತಿಯಾಗಿ ಯಾವುದೇ ದುಶ್ಚ’ಟಗಳಿಗೆ ಬಲಿ‌ ಬೀಳದಂತೆ ಜಾಗ್ರತೆ ವಹಿಸಬೇಕು ಎಂದು ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ನಾಮದೇವ ರಾವ್ ಮುಂಡಾಜೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಕಲ್ಮಂಜ ಸರಕಾರಿ ಪ್ರೌಢ  ಶಾಲೆಯಲ್ಲಿ ಸೆ.9 ರಂದು ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ‌ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ‌ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರು ಮಾತನಾಡಿ,  ವಿದ್ಯಾರ್ಥಿ‌ ಜೀವನ ಪಾವನವಾದದ್ದು. ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕಾದ ನೀವು ಯಾವುದೇ ವ್ಯಸನಗಳ ಕಡೆಗೆ ಆಕರ್ಷಿತರಾಗಬಾರದು. ಅದಕ್ಕಾಗಿ ಗ್ರಾ. ಯೋಜನೆ ಹಾಗೂ ಜನಜಾಗೃತಿ ವೇದಿಕೆ ಈ‌ಮಹತ್ ಕಾರ್ಯ‌ಕೈಗೆತ್ತಿಕೊಂಡಿದೆ ಎಂದರು. ಪತ್ರಕರ್ತ, ಜನಜಾಗೃತಿ ವೇದಿಕೆಯ ತಾ.ಸಮಿತಿ ಸದಸ್ಯ ಅಚ್ಚು ಮುಂಡಾಜೆ ಸಂಪನ್ಮೂಲ ವ್ಯಕ್ತಿಯಾಗಿದ್ದು, ವ್ಯಸನಗಳಿಂದ ಆಗುವ ಅನಾಹುತಗಳ ಬಗ್ಗೆ ಉದಾಹರಣೆ ಸಹಿತ ಮಾಹಿತಿ‌ ನೀಡಿದರು.

ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ದನ ಮಾಚಾರು ಪ್ರಸ್ತಾವನೆಗೈದರು. ವಿಭಾಗದ ಸೇವಾ ಪ್ರತಿನಿಧಿ ದಿಶಾ ಜಿನೇಶ್ ವೇದಿಕೆಯಲ್ಲಿ‌ ಉಪಸ್ಥಿತರಿದ್ದರು. ಶಿಕ್ಷಕಿ ಸಾವಿತ್ರಿ ಸ್ವಾಗತಿಸಿದರೆ, ಹೇಮಲತಾ ನಿರೂಪಿಸಿದರು.‌ ಶಿಕ್ಷಕ ಸುಧೀಂದ್ರ, ವಿದ್ಯಾರ್ಥಿ ನಾಯಕಿ ಮುಕ್ಷಿತಾ, ಉಪನಾಯಕ ಮುಹಮ್ಮದ್ ಸಾನಿದ್  ಸಹಕಾರ ನೀಡಿದರು. ಶಿಕ್ಷಕಿ ಹೇಮಲತಾ ಧನ್ಯವಾದವಿತ್ತರು.

- Advertisement -
spot_img

Latest News

error: Content is protected !!