Saturday, May 18, 2024
Homeತಾಜಾ ಸುದ್ದಿವಿವಾದ ಸೃಷ್ಟಿಸಿದ ಹೊಸ ರಾಷ್ಟ್ರ ಲಾಂಛನ: ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ

ವಿವಾದ ಸೃಷ್ಟಿಸಿದ ಹೊಸ ರಾಷ್ಟ್ರ ಲಾಂಛನ: ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ

spot_img
- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ಹೊಸ ವಿವಾದ ಸೃಷ್ಟಿಸಿದೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನವನ್ನು ಅನಾವರಣ ಮಾಡಿದ್ದು ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದೆ.

ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ಬೃಹತ್ ಶಿಲ್ಪವನ್ನು ವಿನ್ಯಾಸಗೊಳಿಸಿದ ಶಿಲ್ಪಿಗಳು, ಲಾಂಛನದ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ರಾಷ್ಟ್ರ ಲಾಂಛನದಲ್ಲಿನ ಸಿಂಹಗಳು ಸೌಮ್ಯ ಭಾವನೆಗಳನ್ನು ಹೊರಹೊಮ್ಮಿಸುವುದಕ್ಕೆ ಹೆಸರಾಗಿವೆ. ಆದರೆ, ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ಯನ್ನು ಬಿಂಬಿಸಿದಂತೆ ಕಾಣಿಸುತ್ತಿವೆ ಎಂದು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಟ್ವೀಟ್ ಮಾಡಿದೆ.

ಪ್ರಧಾನಿ ಮೋದಿ ಅವರ ‘ಅಮೃತ ಕಾಲ’ ಹೇಳಿಕೆಯನ್ನು ಟೀಕಿಸಿರುವ ಆರ್‌ಜೆಡಿ, “ಮೂಲ ಲಾಂಛನವು ಸೌಮ್ಯ ಭಾವನೆಗಳನ್ನು ಹೊಂದಿತ್ತು. ಆದರೆ ‘ಅಮೃತ ಕಾಲ’ದಲ್ಲಿ ನಿರ್ಮಿಸಿದ ಜನರು ದೇಶದಲ್ಲಿರುವ ಎಲ್ಲವನ್ನೂ ತಿಂದು ತೇಗುವ ನರಭಕ್ಷಕರ ಪ್ರವೃತ್ತಿಯನ್ನು ತೋರಿಸಿದ್ದಾರೆ” ಎಂದು ಕಿಡಿಕಾರಿದೆ. ಪ್ರತಿ ಚಿಹ್ನೆಯೂ ಮನುಷ್ಯರ ಆಲೋಚನೆಗಳನ್ನು ತೋರಿಸುತ್ತದೆ. ಸಂಕೇತಗಳು ಮನುಷ್ಯರ ನೈಜ ಸ್ವಭಾವವನ್ನು ವಿವರಿಸುತ್ತದೆ ಎಂದು ಹೇಳಿದೆ.

“ಸರ್ಕಾರದ ಮುಖ್ಯಸ್ಥರಾಗಿ, ಹೊಸ ಸಂಸತ್ ಕಟ್ಟಡದ ಮೇಲೆ ಪ್ರಧಾನಿ ರಾಷ್ಟ್ರೀಯ ಲಾಂಛನವನ್ನು ಅನಾವರಣ ಮಾಡಬಾರದಿತ್ತು. ಪ್ರಧಾನಿಯವರು ಎಲ್ಲ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ವಕ್ತಾರ ಮತ್ತು ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಮಾಜಿ ಸಿಇಒ ಜವಾಹರ್ ಸಿರ್ಕಾರ್, “ಇದು ನಮ್ಮ ರಾಷ್ಟ್ರೀಯ ಲಾಂಛನ ಮತ್ತು ಅಶೋಕನ ಸಿಂಹಗಳಿಗೆ ಮಾಡಿರುವ ಅವಮಾನ” ಎಂದು ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!