Wednesday, June 24, 2026
Homeಕೊಡಗುಭೂಕಂಪ ಪೀಡಿತ ಚೆಂಬು ಗ್ರಾಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

ಭೂಕಂಪ ಪೀಡಿತ ಚೆಂಬು ಗ್ರಾಮಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

- Advertisement -
- Advertisement -

ಮಡಿಕೇರಿ: ಸತತ ಭೂಕಂಪನಕ್ಕೆ ತುತ್ತಾಗಿರುವ ಮಡಿಕೇರಿ ತಾಲೂಕಿನ ಚೆಂಬು ಗ್ರಾಮಕ್ಕೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಭೇಟಿ ನೀಡಿದ್ದಾರೆ.

ಚೆಂಬು ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಸುರೇಶ್ ಕುಮಾರ್, ಶಾಲೆಯಲ್ಲಿ ಸಿಸ್ಮೋ ಮೀಟರ್ ಅಳವಡಿಸಿರುವುದನ್ನು ವೀಕ್ಷಿಸಿ ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.

ಬಳಿಕ ಭೂ ಕುಸಿತದಿಂದಾಗಿ ಹಾನಿಗೊಳಗಾಗಿರುವ ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಜೊತೆ ಕೂಡಾ ಸುರೇಶ್ ಕುಮಾರ್ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!