Sunday, April 28, 2024
Homeಕ್ರೀಡೆನಟ ರಿ‍ಷಬ್ ಶೆಟ್ಟಿ ಎಂಟ್ರಿಯೊಂದಿಗೆ ಬದಲಾಯ್ತು ರಾಯಲ್​ ಚಾಲೆಂಜರ್ಸ್​ ಹೆಸರು!; ತಂಡದ ಅದೃಷ್ಟ ಕೂಡ ಬದಲಾಗುತ್ತಾ;...

ನಟ ರಿ‍ಷಬ್ ಶೆಟ್ಟಿ ಎಂಟ್ರಿಯೊಂದಿಗೆ ಬದಲಾಯ್ತು ರಾಯಲ್​ ಚಾಲೆಂಜರ್ಸ್​ ಹೆಸರು!; ತಂಡದ ಅದೃಷ್ಟ ಕೂಡ ಬದಲಾಗುತ್ತಾ; ಅಭಿಮಾನಿಗಳಿಂದ ಪ್ರಶ್ನೆ?

spot_img
- Advertisement -
- Advertisement -

16ನೇ ಆವೃತ್ತಿಯನ್ನು ಪೂರ್ಣಗೊಳಿಸಿರುವ ವಿಶ್ವದ ಕ್ರಿಕೆಟ್​ ಪ್ರಿಯರ ನೆಚ್ಚಿನ ಪ್ರೀಮಿಯರ್ ಲೀಗ್​ ಐಪಿಎಲ್​ ಮತ್ತೆ ಬರ್ತಿದೆ. 17ನೇ ಆವೃತ್ತಿಯ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಇದರ ನಡುವೆಯೇ ಬೆಂಗಳೂರು ರಾಯಲ್ ಚಾಲೆಂಜರ್ಸ್​ ತಂಡ ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿದೆ. ಈ ಕುರಿತ ಒಂದು ಪ್ರಚಾರದ ವೀಡಿಯೊವನ್ನು ಆರ್​ಸಿಬಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈಗಾಗಲೇ ಆರ್‌ಸಿಬಿ ತಂಡ ಕೆಲವೊಂದು ವಿಚಾರಗಳ ಕುರಿತು ಹಿಂಟ್ ನೀಡಿದ್ದು, ಅನ್‌ಬಾಕ್ಸ್‌ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು, ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ ಇದೀಗ ಸ್ಯಾಂಡಲ್​​ವುಡ್​ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ ಅವರು ಕಾಣಿಸಿಕೊಂಡಿರುವ ಪ್ರೋಮೋ ಒಂದನ್ನು ಆರ್​ಸಿಬಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ವಿಡಿಯೋದಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಸರ್ಫೈಸ್ ಒಂದನ್ನು ಕೂಡ ನೀಡಿದೆ.

ಪ್ರೋಮೋದಲ್ಲಿ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಶಿವ ಆಗಿ ಕಾಣಿಸಿಕೊಂಡಿದ್ದು, ಕಂಬಳ ರೇಸ್ ಗೆ ಸಿದ್ಧರಾಗಿ ಆಗಮಿಸುತ್ತಾರೆ. ಈ ವೇಳೆ ಮೂರು ಕೋಣಗಳಿಗೆ ರಾಯಲ್ ಚಾಲೆಂಜರ್ಸ್ ಎಂಬ ಹೆಸರಿನ ಬಟ್ಟೆಯನ್ನು ಹಾಕಲಾಗಿರುತ್ತದೆ. ರಿಷಬ್ ಶೆಟ್ಟಿ ಮೂರನೇ ಕೋಣದ ಬಳಿ ಅದನ್ನು ತೆಗೆದುಕೊಂಡು ಹೋಗುವಂತೆ ಹೇಳ್ತಾರೆ. ಆ ಬಳಿಕ ಅಭಿಮಾನಿಗಳಿಗೆ ಅರ್ಥ ಆಯ್ತಾ ಅಂತ ಪ್ರಶ್ನಿಸಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಮುಂದೆ ಬೆಂಗಳೂರು ಎನ್ನುವ ಹೆಸರು ಬದಲಾಗುವ ಸಾಧ್ಯತೆ ಎನ್ನುವ ಹಾಗೆ ಈ ಪ್ರೋಮೋದಲ್ಲಿ ಕಂಡು ಬಂದಿದೆ. ಇನ್ನು ಈ ಪ್ರೋಮೊ ನೋಡಿದ ಅಭಿಮಾನಿಗಳು ಕಾಮೆಂಟ್ ಮೂಲಕ ನಮಗೆ ಅರ್ಥವಾಗ್ತಿಲ್ಲ…. ನೀವೆ ಹೇಳಿ…. ಹೆಸರು ಬದಲಾವಣೆ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ.

ತಂಡದ ಹೆಸರಿನ ಬದಲಾವಣೆಯೊಂದಿಗೆ, ತಂಡದ ಅದೃಷ್ಟ ಕೂಡ ಬದಲಾಗುತ್ತಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರು ಹೇಳಿದ ಪ್ರಶ್ನೆಗೆ ಆರ್​ಸಿಬಿ ಮಾರ್ಚ್​ 19ರಂದು ಉತ್ತರವನ್ನು ರಿವೀಲ್ ಮಾಡಲಿದೆ.

- Advertisement -
spot_img

Latest News

error: Content is protected !!