Sunday, May 5, 2024
Homeತಾಜಾ ಸುದ್ದಿಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲ್ಲ; ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ

ಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲ್ಲ; ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ

spot_img
- Advertisement -
- Advertisement -

ಮೈಸೂರು : ಟಿಕೆಟ್ ಸಿಗದಿದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲ್ಲ ಎಂದು  ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿದ್ದೇನೆ . ಆದರೆ ಯಾವುದೇ ಕಾರಣಕ್ಕೂ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಬಿಎಸ್ ವೈ ಅವರನ್ನು ಎಳೆದು ತರಬೇಡಿ. ಬಿಎಸ್ ವೈ ಪಕ್ಷ ಕಟ್ಟದಿದ್ದರೆ ಬಿಜೆಪಿ ಎಲ್ಲಿ ಇರುತ್ತಿತ್ತು? ಬಿ ಎಸ್ ವೈ ಬಿಜೆಪಿ ಕಟ್ಟದಿದ್ದರೆ ನಮ್ಮಂತವರು ಎಂಪಿ ಆಗುತ್ತಿದ್ವ? ಕರ್ನಾಟಕಕ್ಕೆ ಬಿಎಸ್ ವೈ ಒಂದು ರೀತಿ ಮೋದಿ ಇದ್ದ ಹಾಗೆ ಎಂದು ಅವರು ತಿಳಿಸಿದರು.

ಏಕಾಂಗಿಯಾಗಿ ಬಿಎಸ್ವೈ ಪಕ್ಷವನ್ನು ಕಟ್ಟಿದರು.1983 ರಲ್ಲಿ ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳು ಮಾತ್ರ ಇತ್ತು. ಇದೀಗ ಈ ಮಟ್ಟಕ್ಕೆ ಬಿಜೆಪಿ ಪಕ್ಷ ಬೆಳೆದಿದ್ದೆ ಅದಕ್ಕೆ ಬಿ ಎಸ್ ವೈ ಕಾರಣ. ಪ್ರಧಾನಿ ನರೇಂದ್ರ ಮೋದಿ ನನಗೆ ಸದಾ ಪ್ರೇರಣೆ ಮೋದಿ ಅವರು ಏನೇ ನಿರ್ಧಾರ ತೆಗೆದುಕೊಂಡರು ಕೂಡ ಅದನ್ನು ಸ್ವೀಕರಿಸುತ್ತೇನೆ ಎಂದರು.

ಮೋದಿ ಅವರಿಗಿಂತ ದೊಡ್ಡದು ಯಾವುದು ಇಲ್ಲ.ಅವಕಾಶ ಕೊಟ್ಟರೂ ತೃಪ್ತಿ ಇದೆ ಕೊಡದಿದ್ದರೂ ಕೂಡ ತೃಪ್ತಿ ಇದೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮೈಸೂರು ನಗರದಲ್ಲಿ ಬಿಜೆಪಿ ಸಂಸದ ಪ್ರಾಥಮಿಕ ಸ್ಪಷ್ಟನೆ ನೀಡಿದ್ದಾರೆ. 1960 ರಲ್ಲಿ ನಮ್ಮಪ್ಪ ಜನಸಂಘದಲ್ಲಿ ಇದ್ದರು. ಕರ್ನಾಟಕದಲ್ಲಿ ಎಷ್ಟು ಸಂಸದರು ಪರವಾಗಿ ಹೋರಾಟ ಆಗುತ್ತಿದೆ. ಟಿಕೆಟ್ ಕೊಡಬೇಕೆಂದು ಜನ ಕೇಳುತ್ತಿದ್ದಾರೆ ನನಗೆ ಅಷ್ಟೇ ಸಾಕು ಎಂದಿದ್ದಾರೆ.

- Advertisement -
spot_img

Latest News

error: Content is protected !!