Wednesday, April 24, 2024
Homeಕರಾವಳಿಉಡುಪಿಉಡುಪಿ: ಮೊಮ್ಮಕ್ಕಳನ್ನು ಕಲಾವಿದರನ್ನಾಗಿಸಿದ ಅಜ್ಜನ ಮೇಲಿನ ಪ್ರೀತಿ: ಮೊಮ್ಮಕ್ಕಳ ಕಲಾಸಕ್ತಿಗೆ ಸಾಕ್ಷಿಯಾಯ್ತು ಅಜ್ಜನ ಸುಂದರ ಮೂರ್ತಿ

ಉಡುಪಿ: ಮೊಮ್ಮಕ್ಕಳನ್ನು ಕಲಾವಿದರನ್ನಾಗಿಸಿದ ಅಜ್ಜನ ಮೇಲಿನ ಪ್ರೀತಿ: ಮೊಮ್ಮಕ್ಕಳ ಕಲಾಸಕ್ತಿಗೆ ಸಾಕ್ಷಿಯಾಯ್ತು ಅಜ್ಜನ ಸುಂದರ ಮೂರ್ತಿ

spot_img
- Advertisement -
- Advertisement -

ಉಡುಪಿ: ಇವರು ನುರಿತ ಕಲಾವಿದರಲ್ಲ.. ಆದರೆ ಅಜ್ಜನ ಮೇಲಿನ ಪ್ರೀತಿ ಇವರನ್ನು ಕಲಾವಿದರನ್ನಾಗಿಸಿದೆ. ನಿಧನದ  ನಂತರ ಅಜ್ಜನ ನೆನಪಿಗೆ ಏನಾದರೂ ಮಾಡಬೇಕೆಂದು ಮೊಮ್ಮಕ್ಕಳು ಒಟ್ಟಾಗಿ ತೀರ್ಮಾನಿಸಿದರು ಕೊನೆಗೂ ನಿರ್ಮಾಣವಾಯಿತು ಅಜ್ಜನ ಸುಂದರಮೂರ್ತಿ!  ಪ್ರೀತಿಗೆ ಅದೆಂಥಾ ಶಕ್ತಿ ಇದೆ ಅಲ್ವಾ

ಚಿನ್ನ ಆರ್ ಅಂಚನ್ ಪ್ರಗತಿಪರ ಕೃಷಿಕರು. ಉಡುಪಿ ಜಿಲ್ಲೆಯ ಮಟ್ಟು ಗ್ರಾಮದವರು. ಮಟ್ಟುಗುಳ್ಳವನ್ನು ಹೊರ ಜಿಲ್ಲೆಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರಾಜಕೀಯ, ಧಾರ್ಮಿಕ,ಸಾಮಾಜಿಕ ,ಕ್ಷೇತ್ರದಲ್ಲಿ ತೊಡಗಿಸಿಕೊಂಡುವರು. ಮಟ್ಟು ಗ್ರಾಮದ ಜನರಿಗೆ ಚಿನ್ನ ಅಂಚನ್ ಚಿರಪರಿಚಿತರು. ಊರಿನವರ ಪ್ರೀತಿಯ ಚಿನ್ನಣ್ಣ ಮನೆಯಲ್ಲಿ ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜ.

ಚಿನ್ನ ಅಂಚನ್ ದಂಪತಿಗಳಿಗೆ ಎಂಟು ಜನ ಮಕ್ಕಳಲ್ಲಿ 7 ಗಂಡು 1ಹೆಣ್ಣು ಜೊತೆಗೆ ಸೊಸೆಯಂದಿರು. ಮೊಮ್ಮಕ್ಕಳು, ಮರಿಮಕ್ಕಳು, ಅಳಿಯ ಸೇರಿದ ಕೂಡುಕುಟುಂಬ. ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರು. ಆದಿತ್ಯವಾರ ಅಥವಾ ರಜಾಕಾಲದಲ್ಲಿ ಇವರೆಲ್ಲಾ ಬಂದು ಸೇರುತ್ತಿದ್ದದ್ದು ಅಜ್ಜನಮನೆಯಲ್ಲಿ.  ಮಳೆಗಾಲ ಆರಂಭವಾದ ನಂತರ ಪ್ರತೀ ಆದಿತ್ಯವಾರ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗುತ್ತಿತ್ತು. ಜೊತೆಗೆ ಅಜ್ಜನ ಜೊತೆ ಹರಟೆ, ಮೋಜು, ಮಸ್ತಿ, ನೀತಿಪಾಠ ಹೀಗೆ ಖುಷಿಪಡುತ್ತಿದ್ದರು….

82 ವರ್ಷದ ಚಿನ್ನ ಅಂಚನ್ ಅವರು ಇತ್ತೀಚಿಗೆ ನಿಧನ ಹೊಂದಿದರು. ಅಜ್ಜನನ್ನು ಕಳೆದುಕೊಂಡ ಮೊಮ್ಮಕ್ಕಳು ಅಜ್ಜ ಸದಾ ನಮ್ಮ ಜೊತೆಗೆ ಇರಬೇಕೆಂಬುದು ಆಸೆಪಟ್ಟರು.ಯೂಟ್ಯೂಬ್ ಸಾಮಾಜಿಕ ಜಾಲತಾಣಗಳಲ್ಲಿ ಮೂರ್ತಿ ತಯಾರಿ ಹೇಗೆ ಮಾಡುವುದೆಂದು ಮಾಹಿತಿ  ಕಲೆಹಾಕಿದರು.

ಈಗ ಮನೆಮಂದಿ ಎಲ್ಲರೂ ಸೇರಿ ಅಜ್ಜನ ಸುಂದರಮೂರ್ತಿ ನಿರ್ಮಾಣ ಮಾಡಿದ್ದಾರೆ. ಅಜ್ಜನನ್ನೇ ಹೋಲುವ ರೀತಿಯಲ್ಲಿ ಈ ವಿಗ್ರಹ ನಿರ್ಮಾಣ ಮಾಡಿದ್ದಾರೆ. ಮನೆಯ ಅಂಗಳದಲ್ಲಿ ಅಜ್ಜನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅಜ್ಜ ತಮ್ಮ ಜೊತೆಗಿಲ್ಲ ಎಂಬ ನೋವನ್ನು ಈ ಮೂಲಕ  ದೂರ ಮಾಡಿಕೊಂಡಿದೆ ಈ ತುಂಬು ಕುಟುಂಬ.

ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಅಜ್ಜನ ಮೂರ್ತಿ ನಿರ್ಮಾಣ ಮಾಡಲಾಗಿದೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯ, ಮರಿಮಕ್ಕಳು ಸೇರಿ ನಿರ್ಮಾಣ ಮಾಡಿದ ಅಜ್ಜನ ಮೂರ್ತಿ ಕೇವಲ ಒಂದು ಮೂರ್ತಿಯಲ್ಲ ಕುಟುಂಬ ಜೀವನದ ಸಾರ್ಥಕದ ಸುಂದರ ಮಾದರಿ ಯಂತಿದೆ.

ಜೇನಿನ ಗೂಡು ನಾವೆಲ್ಲ ಎಂಬಂತೆ ಅಜ್ಜ-ಅಜ್ಜಿ ಜೊತೆಯಾಗಿ ಬಾಳುವುದೇ ಮೊಮ್ಮಕ್ಕಳಿಗೆ ಸಂತಸವಾಗಿತ್ತು. ಈಗ ಈ ಪ್ರತಿಮೆಯಲ್ಲಿ ಹಳೆ ನೆನಪುಗಳನ್ನು ಮೆಲುಕು ಹಾಕಲು ಅವಕಾಶವಾಗಿದೆ. ಚಿನ್ನ ಅಂಚನ್ ರ ಈ ಕುಟುಂಬ ಕೃಷಿಕಾರ್ಯದಲ್ಲಿ ಅಜ್ಜನ ಜೊತೆಗೆ ಕಳೆದ ನೆನಪುಗಳು ಇನ್ಬು ಶಾಶ್ವತ. ಇವರ ಈ ಕುಟುಂಬ ಸಂಸ್ಕಾರ ,ಎಲ್ಲರಿಗೂ ಮಾದರಿಯಾಗಲಿ ಎಂಬುದೇ ನಮ್ಮ ಆಶಯ.

- Advertisement -
spot_img

Latest News

error: Content is protected !!