Sunday, May 5, 2024
Homeತಾಜಾ ಸುದ್ದಿಕಾರವಾರ: ಮೀನುಗಾರರ ಬಲೆಗೆ ಬಿದ್ದ ಉದ್ದ ಕಣ್ಣಿನ ಏಡಿ: ಅಪರೂಪದ ಏಡಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

ಕಾರವಾರ: ಮೀನುಗಾರರ ಬಲೆಗೆ ಬಿದ್ದ ಉದ್ದ ಕಣ್ಣಿನ ಏಡಿ: ಅಪರೂಪದ ಏಡಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

spot_img
- Advertisement -
- Advertisement -

ಕಾರವಾರ: ಸದ್ಯ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ, ಹೊಳೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೊಸ ನೀರು ಹೆಚ್ಚಾದಂತೆ ಮೀನು, ಏಡಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಮಳೆಗಾಲ ಬಂತೆಂದರೆ ಮಾಂಸ ಪ್ರಿಯರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಖುಷಿಯೋ ಖುಷಿ. ಕಾರಣ ಮೀನು, ಏಡಿಗಳು ಹೆಚ್ಚಾಗಿ ಸಿಗುತ್ತವೆ. ಒಂದು ಕಡೆ ಮಳೆ, ಇನ್ನೊಂದು ಕಡೆ ಮೀನು, ಏಡಿ ಹಿಡಿಯುವುದೇ ಒಂದು ರೀತಿ ಹಬ್ಬ. ಇದೇನೇ ಇರಲಿ, ಇಂದು ಕಾರಾವಾರ ತಾಲೂಕಿನ ಮಾಜಾಳಿಯಲ್ಲಿ ಅತ್ಯಂತ ವಿರಳವಾದ ಉದ್ದ ಕಣ್ಣಿನ ಏಡಿ ಪತ್ತೆಯಾಗಿದೆ. ಈ ಏಡಿಯನ್ನು ನೋಡಿ ಮೀನುಗಾರರು ಆಶ್ಚರ್ಯಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಮೀನುಗಾರರು ಬಲೆ ಹಾಕಿದ್ದರು. ಈ ವೇಳೆ ಅಪರೂಪದ ಏಡಿಯೊಂದು ಬಲೆಗೆ ಬಿದ್ದಿದೆ. ಈ ಏಡಿ ತನ್ನ ದೇಹದಷ್ಟೇ ಉದ್ದವಿರುವ ಕಡ್ಡಿಯಂತ ರಚನೆಯ ತುದಿಯಲ್ಲಿ ಕಣ್ಣುಗಳನ್ನ ಹೊಂದಿದೆ. ಸ್ಯುಡೊಪೊತಾಲಾಮಸ್ ವಿಜಿಲ್ ಎಂದು ಕರೆಯಲ್ಪಡುವ ಏಡಿ ಇದಾಗಿದೆ. ಇನ್ನು ಈ ಏಡಿ ಸಾಮಾನ್ಯವಾಗಿ ಹವಾಯಿ ದ್ವೀಪ, ಕೆಂಪು ಸಮುದ್ರ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ. ಈ ಅಪರೂಪದ ಏಡಿಗೆ ಮಾರುಕಟ್ಟೆಯಲ್ಲಿ ಸಕತ್ ಬೇಡಿಕೆಯೂ ಇದೆ.

- Advertisement -
spot_img

Latest News

error: Content is protected !!