Thursday, June 4, 2026
Homeತಾಜಾ ಸುದ್ದಿವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಕೆಎಸ್ಆರ್​ಟಿಸಿ ಬಸ್ ಪಲ್ಟಿ; ಚಾಲಕ ಸಹಿತ ಮೂವರು ವಿಧ್ಯಾರ್ಥಿಗಳು ಗಂಭೀರ

ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಕೆಎಸ್ಆರ್​ಟಿಸಿ ಬಸ್ ಪಲ್ಟಿ; ಚಾಲಕ ಸಹಿತ ಮೂವರು ವಿಧ್ಯಾರ್ಥಿಗಳು ಗಂಭೀರ

- Advertisement -
- Advertisement -

ಸವಣೂರು ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಕೆಎಸ್ಆರ್​ಟಿಸಿ ಬಸ್ ಪಲ್ಟಿಯಾಗಿ ಬಸ್ ಚಾಲಕ ಸಹಿತ ಮೂವರು ವಿಧ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಘಟನೆಯಲ್ಲಿ ಡ್ರೈವರ್ ಮಲಪ್ಪ ಹೊಸೂರು, ವಿದ್ಯಾರ್ಥಿಗಳಾದ ವಿವ್ಯಾ ಸಜ್ಜಲಗುಡ್ಡ ,ಸವಿತಾ ರವಿ ರೆಡ್ಡಿ, ಗುರು ಗೌಡ ಗಂಭೀರವಾಗಿ ಗಾಯಗೊಂಡವರು.

ಕೆಎಸ್ಆರ್​ಟಿಸಿ ಬಸ್ ನಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರ ತಾ. ಸಜ್ಜಲಗುಡ್ಡದ ಹಿರಿಯ ಪ್ರಾರ್ಥಮಿಕ ಶಾಲೆಯ 53 ವಿದ್ಯಾರ್ಥಿಗಳು ಮತ್ತು 6 ಜನ ಶಿಕ್ಷಕರು ಶಿಗ್ಗಾಂವಿ ತಾಲೂಕಿನ ಗೊಟಗೋಡಿ ರಾಕ್ ಗಾರ್ಡನ್ ವೀಕ್ಷಿಸಲು ಹೊರಟಿದ್ದರು. ಈ ವೇಳೆ ಬೇವಿನಹಳ್ಳಿ ಕ್ರಾಸ್ ಬಳಿ ಎದುರಿಗೆ ವೇಗವಾಗಿ ಬಂದ ಕಾರನ್ನು ತಪ್ಪಿಸಲು ಯತ್ನಿಸಿದಾಗ ಬಸ್‌ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಬೆನ್ನು ಮೂಳೆ ಮುರಿತಕ್ಕೊಳಗಾದ ಡ್ರೈವರ್ ಮತ್ತು ಗಂಭೀರ ಗಾಯಗೊಂಡ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಲಾಗಿದೆ. ಸಣ್ಣಪಟ್ಟ ಗಾಯಗಳಾದ ವಿದ್ಯಾರ್ಥಿಗಳನ್ನು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

- Advertisement -

Latest News

error: Content is protected !!