Tuesday, June 30, 2026
Homeತಾಜಾ ಸುದ್ದಿಉಡುಪಿ: ಹಿಜಾಬ್ ವಿವಾದ- ಮಕ್ಕಳ ಶೈಕ್ಷಣಿಕ ಹಕ್ಕನ್ನು ಕೋರ್ಟ್ ಎತ್ತಿ ಹಿಡಿಯುವ ನಂಬಿಕೆಯಿದೆ: ಯಶ್‌ಪಾಲ್ ಸುವರ್ಣ

ಉಡುಪಿ: ಹಿಜಾಬ್ ವಿವಾದ- ಮಕ್ಕಳ ಶೈಕ್ಷಣಿಕ ಹಕ್ಕನ್ನು ಕೋರ್ಟ್ ಎತ್ತಿ ಹಿಡಿಯುವ ನಂಬಿಕೆಯಿದೆ: ಯಶ್‌ಪಾಲ್ ಸುವರ್ಣ

- Advertisement -
- Advertisement -

ಉಡುಪಿ: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ದೇಶದ ಮಕ್ಕಳ ಶೈಕ್ಷಣಿಕ ಹಕ್ಕನ್ನು ಕೋರ್ಟ್ ಎತ್ತಿ ಹಿಡಿಯುವ ನಂಬಿಕೆಯಿದೆ ಎಂದು ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಇನ್ನು 6 ವಿದ್ಯಾರ್ಥಿನಿಯರನ್ನು ಮೂಲಭೂತವಾದಿ ಸಂಘಟನೆಗಳು ದುರುಪಯೋಗ ಪಡಿಸಿಕೊಂಡಿದ್ದು, ಅವರಿಗೂ ಅವರ ತಪ್ಪಿನ ಅರಿವಾಗಿರಬಹುದು. ನ್ಯಾಯಾಲಯವು ರಾಜ್ಯದ ಎಲ್ಲಾ ನ್ಯಾಯಾಧೀಶರ ಜೊತೆ ಚರ್ಚಿಸಿ ತೀರ್ಪು ನೀಡಲಿದೆ ಎಂದಿದ್ದಾರೆ.

ಹಿಜಾಬ್ ವಿವಾದ ಸಾಂವಿಧಾನಿಕ ವಿಚಾರವಾದ ಕಾರಣ ವಿಸ್ತೃತವಾದ ವಿಚಾರಣೆ ಮತ್ತು ಚರ್ಚೆಗಳು ನಡೆದಿವೆ. ಹಾಗಾಗಿ ಸುಪ್ರೀಂಕೋರ್ಟಿಗೆ ಹೋದರೂ ಇದೇ ತೀರ್ಪು ಅಂತಿಮ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!