Monday, June 8, 2026
Homeಕೊಡಗುಕೊಡಗಿನ ಜನರಿಗೆ ಕಾಶ್ಮೀರ್ ಫೈಲ್ಸ್ ಸಿನಿಮಾ 2 ದಿನ ಫ್ರೀ ಶೋ: ವಿರಾಜಪೇಟೆ ಶಾಸಕ ಕೆ.ಜಿ....

ಕೊಡಗಿನ ಜನರಿಗೆ ಕಾಶ್ಮೀರ್ ಫೈಲ್ಸ್ ಸಿನಿಮಾ 2 ದಿನ ಫ್ರೀ ಶೋ: ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ವ್ಯವಸ್ಥೆ

- Advertisement -
- Advertisement -

ಮಡಿಕೇರಿ: ಕೊಡಗಿನಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಎರಡು ದಿನಗಳ‌ ಕಾಲ ಉಚಿತವಾಗಿ ಪ್ರದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ.

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸುಂಟಿಕೊಪ್ಪದ ಗಣೇಶ್ ಥಿಯೇಟರ್ ನಲ್ಲಿ ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ಕಾಲ ಉಚಿತ ಪ್ರದರ್ಶನದ ವ್ಯವಸ್ಥೆ ಕಲ್ಪಿಸಿದ್ದಾರೆ.ಬೆಳಗ್ಗೆ 10ಗಂಟೆಗೆ, ಮಧ್ಯಾಹ್ನ 2 ಗಂಟೆಗೆ, ಸಂಜೆ 5 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ ದಿನಕ್ಕೆ ತಲಾ ನಾಲ್ಕು ಪ್ರದರ್ಶನ ಇರಲಿದೆ.

ಪ್ರತಿ ಪ್ರದರ್ಶನದ 250 ಟಿಕೆಟ್ ಗಳನ್ನು ಆಸಕ್ತರು ಸ್ಥಳದಲ್ಲಿಯೇ ಉಚಿತವಾಗಿ ಪಡೆದುಕೊಳ್ಳಬಹುದಾಗಿದ್ದು, ಪ್ರತಿ ಪ್ರದರ್ಶನದ 50 ಟಿಕೆಟ್ ಗಳನ್ನು ಕೊಡಗು ಜಿಲ್ಲೆಯ ಹಿರಿಯ ನಾಗರಿಕರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಾಯ್ದಿರಿಸಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!