Tuesday, April 23, 2024
Homeತಾಜಾ ಸುದ್ದಿಮೊಬೈಲ್ ಕೊಳ್ಳಲು ರಕ್ತ ಮಾರಾಟ ಮಾಡಲು ಮುಂದಾದ ಬಾಲಕಿ

ಮೊಬೈಲ್ ಕೊಳ್ಳಲು ರಕ್ತ ಮಾರಾಟ ಮಾಡಲು ಮುಂದಾದ ಬಾಲಕಿ

spot_img
- Advertisement -
- Advertisement -

ಪಶ್ಚಿಮ ಬಂಗಾಳ; ಮೊಬೈಲ್ ಕೊಳ್ಳಲು 16 ವರ್ಷದ ಬಾಲಕಿಯೊಬ್ಬಳು ತನ್ನ ರಕ್ತವನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಈ ಬಾಲಕಿಯು ಆನ್ಲೈನ್ ಶಾಪಿಂಗ್ ಮೂಲಕ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದಳು. ಇದರ ಬೆಲೆ ಸುಮಾರು 9,000 ರೂ.ಗಳಾಗಿದ್ದು, ಅದರ ಡೆಲಿವರಿ ಗಾಗಿ ಕಾಲ್ ಬಂದಿದೆ. ಈ ವೇಳೆ ಮೊಬೈಲ್ ಗೆ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ, ಅವಳು ಟ್ಯೂಷನ್ ಗೆ ಹೋಗುವುದಾಗಿ ಹೇಳಿ ಮನೆಯಿಂದ ಬಸ್ ಹತ್ತಿ ತನ್ನ ರಕ್ತವನ್ನು ಮಾರಾಟ ಮಾಡಲು ಬಲೂರ್ ಘಾಟ್ ನ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದಾಳೆ.

ಬಾಲಕಿ ಜಿಲ್ಲಾಸ್ಪತ್ರೆಗೆ ತೆರಳಿ ರಕ್ತ ಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ರಕ್ತದಾನಕ್ಕೆ ಪ್ರತಿಯಾಗಿ ಬಾಲಕಿ ಹಣಕ್ಕೆ ಬೇಡಿಕೆ ಇಟ್ಟಾಗ ಸಿಬ್ಬಂದಿ ಸಂದೇಹ ಬಂದಿದೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಶಿಶುಪಾಲನಾ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ.  ಅವರು ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಆಕೆ ನಿಜವಾದ ಕಾರಣವನ್ನು ಹೇಳಿದ್ದಾಳೆ.

ಆಸ್ಪತ್ರೆಯಲ್ಲಿ ಮೊದಲು ಅವಳು ತನ್ನ ಸಹೋದರನ ಚಿಕಿತ್ಸೆಗೆ ಹಣ ಪಾವತಿಸಲು ತನ್ನ ರಕ್ತವನ್ನು ಮಾರಾಟ ಮಾಡಲು ಬಂದಿದ್ದೇನೆ ಎಂದು ಹೇಳಿದ್ದಾಳೆ. ಆದರೆ ನಂತರ, ಸ್ವಲ್ಪ ಸಮಯ ಕೌನ್ಸೆಲಿಂಗ್ ಮಾಡಿದ ನಂತರ ನಾನು ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದೇನೆ, ಹಾಗಾಗಿ ನನಗೆ ಹಣದ ಅವಶ್ಯಕತೆ ಇದೆ. ರಕ್ತ ಕೊಡಲು ಬಂದಿದ್ದೇನೆ ಎಂದು ಬಾಲಕಿ ಸತ್ಯ ಬಾಯ್ಬಿಟ್ಟಿದ್ದಾಳೆ.

- Advertisement -
spot_img

Latest News

error: Content is protected !!