Friday, June 5, 2026
Homeತಾಜಾ ಸುದ್ದಿ24ನೇ ಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ

24ನೇ ಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ

- Advertisement -
- Advertisement -

ಮುಂಬೈ; ಖ್ಯಾತ ಉದ್ಯಮಿ 24 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಪರಸಭಾಯ್ ಪೋರ್ವಾಲ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಪರಾಸಭಾಯ್ ಪೋರ್ವಾಲ್ ಅವರು ಕಲಾಚೌಕಿ ಪ್ರದೇಶದ ಶಾಂತಿಕಮಲ್ ಟವರ್‌ನಲ್ಲಿ ವಾಸಿಸುತ್ತಿದ್ದರು.ಈ ಟವರ್‌ನ ಮೇಲಿನ ಮೂರು ಮಹಡಿಗಳು ಪೋರ್ವಾಲ್ ಹೆಸರಿನಲ್ಲಿವೆ.

ಆರ್ಥಿಕ ಸಮಸ್ಯೆ, ವ್ಯವಹಾರದಲ್ಲಿ ನಷ್ಠ ಹಾಗೂ ಒತ್ತಡದಿಂದಾಗಿ ಕಟ್ಟಡದ 24ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು‌‌ ಬಂದಿದೆ. ಪೋರ್ವಾಲ್ ಬರೆದಿರುವ ಡೆತ್​ನೋಟ್​ ಪೊಲೀಸರಿಗೆ ದೊರೆತಿದ್ದು, ಈ‌ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!