Monday, June 8, 2026
Homeತಾಜಾ ಸುದ್ದಿತಾನು ಕೂಡಿಟ್ಟ 5 ಸಾವಿರ ರೂಪಾಯಿಯನ್ನು ಸಿದ್ದರಾಮಯ್ಯ ಅವರ ಚುನಾವಣಾ ವೆಚ್ಚಕ್ಕೆ ನೀಡಿದ ಬಾಲಕಿ

ತಾನು ಕೂಡಿಟ್ಟ 5 ಸಾವಿರ ರೂಪಾಯಿಯನ್ನು ಸಿದ್ದರಾಮಯ್ಯ ಅವರ ಚುನಾವಣಾ ವೆಚ್ಚಕ್ಕೆ ನೀಡಿದ ಬಾಲಕಿ

- Advertisement -
- Advertisement -

ವಿಜಯಪುರ: 5ನೇ ತರಗತಿ ಬಾಲಕಿಯೊಬ್ಬಳು ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚುನಾವಣೆಗಾಗಿ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದೆ.

5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ ತಾನು ಕೂಡಿಟ್ಟ ಹಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚುನಾವಣಾ ವೆಚ್ಚಕ್ಕಾಗಿ ನೀಡಿದ್ದಾಳೆ.ತನಗೆ ಪಾಕೆಟ್ ಮನಿ ರೂಪದಲ್ಲಿ ನೀಡಿದ್ದ ಹಣವನ್ನು ಕುಮಾರಿ ಜಿಯಾ ಕೂಡಿಟ್ಟಿದ್ದಳು.ಹೀಗೆ ಕೂಡಿಟ್ಟ 5 ಸಾವಿರ ರೂ.ಹಣವನ್ನು ವಿಜಯಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲಿ ಗೆಲುವಿಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾಳೆ.

ಆದರೆ ಸಿದ್ದರಾಮಯ್ಯ ಆ ಹಣವನ್ನು ತಾವು ತೆಗೆದುಕೊಳ್ಳದೇ ಬಾಲಕಿಗೆ ವಾಪಾಸ್ ನೀಡಿ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಹೇಳಿದ್ದಾರೆ.

- Advertisement -

Latest News

error: Content is protected !!