Saturday, May 18, 2024
Homeತಾಜಾ ಸುದ್ದಿರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವ ಸೌಲಭ್ಯ ನಿನ್ನೆಗೆ ಅಂತ್ಯ; ರಾಜ್ಯದಲ್ಲಿ ಒಟ್ಟು ಸಂಗ್ರಹವಾದ ಫೈನ್...

ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವ ಸೌಲಭ್ಯ ನಿನ್ನೆಗೆ ಅಂತ್ಯ; ರಾಜ್ಯದಲ್ಲಿ ಒಟ್ಟು ಸಂಗ್ರಹವಾದ ಫೈನ್ ಮೊತ್ತವೆಷ್ಟು?

spot_img
- Advertisement -
- Advertisement -

ಬೆಂಗಳೂರು: 50% ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವ ಸೌಲಭ್ಯ ನಿನ್ನೆಗೆ ಅಂತ್ಯವಾಗಿದ್ದು  ರಾಜ್ಯಾದ್ಯಂತ 9 ದಿನದಲ್ಲಿ 52.49 ಲಕ್ಷ ಕ್ಕೂ ಹೆಚ್ಚು ಕೇಸ್ ಗಳಿಂದ ಒಟ್ಟು 122.07 ಕೋಟಿ ರೂ. ದಂಡ ಸಂಗ್ರವಾಗಿದೆ.

ಈ ಬಗ್ಗೆ ಸಂಚಾರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸಂಚಾರಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆಯಾದ ದಿನದಿಂದ ನಿನ್ನೆಯವರೆಗೆ 52.49 ಲಕ್ಷ ಪ್ರಕರಣಗಳಲ್ಲಿ 122.07 ಕೋಟಿ ರೂಪಾಯಿ ದಂಡ ಕಲೆಕ್ಷನ್ ಆಗಿದೆ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ

ಪ್ರತಿ ದಿನ ಸಂಗ್ರಹವಾದ ದಂಡದ ಮೊತ್ತ;

ಫೆಬ್ರವರಿ 3 – 2.24 ಲಕ್ಷ ಕೇಸ್, 7 ಕೋಟಿ ರೂ.

ಫೆಬ್ರವರಿ 4- 3 ಲಕ್ಷ ಕೇಸ್, 9 ಕೋಟಿ ರೂ.

ಫೆಬ್ರವರಿ 5- 2.87 ಲಕ್ಷ ಕೇಸ್, 7.49 ಕೋಟಿ ರೂ.

ಫೆಬ್ರವರಿ 06- 3.34 ಲಕ್ಷ ಕೇಸ್, 9.57 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

- Advertisement -
spot_img

Latest News

error: Content is protected !!