Friday, May 3, 2024
Homeಕರಾವಳಿಕಾಸರಗೋಡು; ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವರ ಮೂರ್ತಿ ಪೊದೆಯಲ್ಲಿ ಪತ್ತೆ

ಕಾಸರಗೋಡು; ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವರ ಮೂರ್ತಿ ಪೊದೆಯಲ್ಲಿ ಪತ್ತೆ

spot_img
- Advertisement -
- Advertisement -

ಮಂಜೇಶ್ವರ: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವರ ಮೂರ್ತಿ ಪೊದೆಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಇಲ್ಲಿನ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎರಡು ವರ್ಷಗಳ ಹಿಂದೆ  ಪಂಚಲೋಹದ ಉತ್ಸವ ಮೂರ್ತಿ ಕಳವಾಗಿತ್ತು. ಆದರೆ ಸಿಕ್ಕಿರಲಿಲ್ಲ.

ಆದರೆ ಫೆ.9ರಂದು ಸಂಜೆ ಇಲ್ಲಿ ಮಕ್ಕಳು ಫುಟ್ಬಾಲ್‌ ಆಟವಾಡುತ್ತಿದ್ದಾಗ ಪೊದೆಗಳತ್ತ ನೆಗೆದ ಚೆಂಡನ್ನು ಹೆಕ್ಕಲೆಂದು ಹೋದಾಗ ಮೂರ್ತಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ದೇವಸ್ಥಾನ ಸಮಿತಿಯವರು ಮೂರ್ತಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದ್ದಾರೆ.

ಅಂದ್ಹಾಗೆ  2020 ಆ. 10ರಂದು ಗರ್ಭಗುಡಿಯೊಳಗಿದ್ದ 12 ಕಿ.ಗ್ರಾಂ. ತೂಕದ ಉತ್ಸವ ಮೂರ್ತಿ, ಶಿವಲಿಂಗದಲ್ಲಿದ್ದ ಎರಡು ಜತೆ ಬೆಳ್ಳಿಯ ಮುಕ್ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ ಬಟ್ಟಲು, ರುದ್ರಾಕ್ಷಿ ಮಾಲೆ ಮೊದಲಾದವು ಕಳವಿಗೀಡಾಗಿತ್ತು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಇದೀಗ ಮೂರ್ತಿ ಪತ್ತೆಯಾಗಿದೆ.

ಇನ್ನು ಉತ್ಸವ ಮೂರ್ತಿ ಕಳವಿಗೀಡಾದ ಹಿನ್ನೆಲೆಯಲ್ಲಿ ಹೊಸ ಮೂರ್ತಿಯನ್ನು ಸ್ಥಾಪಿಸಿ ಪೂಜೆ ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಈಗ ವರ್ಷಾವಧಿ ಉತ್ಸವ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮೂರ್ತಿ ಪತ್ತೆಯಾಗಿರುವುದು ವಿಶೇಷ.

- Advertisement -
spot_img

Latest News

error: Content is protected !!