Tuesday, June 23, 2026
Homeಕರಾವಳಿನೇತ್ರದಾನದ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದ ಮೋಕ್ಷಿತ್‌; ಉತ್ತರ ಕ್ರಿಯೆಯಲ್ಲಿ ಮೃತ ಮೋಕ್ಷಿತ್‌ರವರ ನೆನಪಿಗಾಗಿ ಹಲಸಿನ ಗಿಡ ವಿತರಸಿದ ಕುಟುಂಬ

ನೇತ್ರದಾನದ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದ ಮೋಕ್ಷಿತ್‌; ಉತ್ತರ ಕ್ರಿಯೆಯಲ್ಲಿ ಮೃತ ಮೋಕ್ಷಿತ್‌ರವರ ನೆನಪಿಗಾಗಿ ಹಲಸಿನ ಗಿಡ ವಿತರಸಿದ ಕುಟುಂಬ

- Advertisement -
- Advertisement -

ವಿಟ್ಲ: ಪುತ್ತೂರು ಸಮೀಪದ ಪುರುಷರ ಕಟ್ಟೆಯಲ್ಲಿ ನಡೆದ ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಕುಂಡಡ್ಕ ನಿವಾಸಿ ಮೋಕ್ಷಿತ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೀಗ ಅವರ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮೃತ ಮೋಕ್ಷಿತ್‌ರವರ ಕನಸಿನಂತೆ ತನ್ನೆರಡು ಕಣ್ಣುಗಳನ್ನು ಸಮಾಜಕ್ಕೆ ದಾನ ಮಾಡಿದ್ದು, ನೇತ್ರದಾನದ ಮೂಲಕ ಸಾವಿನಲ್ಲೂ ಮೋಕ್ಷಿತ್ ಮಾನವೀಯತೆ ಮೆರೆದಿದ್ದಾರೆ.

ಕುಂಡಡ್ಕ ಬಾಳಮೂಳೆ ಆನಂದ ಗೌಡ ಎಂಬವರ ಪುತ್ರ ಮೋಕ್ಷಿತ್‌ ನರಿಮೊಗರು ಬಿಂದು ಫ್ಯಾಕ್ಟರಿಯಲ್ಲಿ ಸಿಪೋನ್‌ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಕ್ಷಿತ್‌ ಪುತ್ತೂರು ಕಡೆಯಿಂದ ಪುರುಷರಕಟ್ಟೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭಿವಿಸಿದೆ. 

ಮೃತ ಮೋಕ್ಷಿತ್‌ ಸಾಮಾಜಿಕ ಕಳಕಳಿಯುಳ್ಲ ಯುವಕನಾಗಿದ್ದು, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇಂದು ಮೃತ ಮೋಕ್ಷಿತ್‌ರವರ ಉತ್ತರ ಕ್ರಿಯೆ ಕಾರ್ಯಕ್ರಮ ವಿಟ್ಲದ ಶಾಂತಿಪಳಿಕೆ ಅಕ್ಷಯ ಸಮುದಾಯ ಭವನದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮೃತ ಮೋಕ್ಷಿತ್‌ರವರ ನೆನಪಿಗಾಗಿ ಹಲಸಿನ ಗಿಡ ನೀಡಲಾಯಿತು.

- Advertisement -

Latest News

error: Content is protected !!