- Advertisement -


- Advertisement -
ತುಮಕೂರಿನಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಮಕ್ಕಳು ಆಂಬ್ಯುಲೆನ್ಸ್ ಸಿಗದೇ ಬೈಕ್ ನಲ್ಲಿ ತಂದೆಯ ಮೃತದೇಹ ಸಾಗಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ನಡೆದಿದೆ.
ವೈ.ಎನ್ ಹೊನ್ನೂರಪ್ಪ(80) ಎಂಬವರು ಅನಾರೋಗ್ಯದಿಂದಾಗಿ ಹೊಸಕೋಟೆಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅಲ್ಲದೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆದರೆ ಅವರ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ಸಿಗದ ಕಾರಣ ಅವರ ಮಕ್ಕಳು ಬೈಕ್ ನ ಮಧ್ಯದಲ್ಲಿ ಮೃತದೇಹ ಇರಿಸಿಕೊಂಡು ಬೈಕ್ ನಲ್ಲೇ ಮನೆಗೆ ಸಾಗಿಸಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಸಕಾಲಕ್ಕೆ ಸಿಗದ ಆಂಬ್ಯುಲೆನ್ಸ್ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
- Advertisement -


