Wednesday, May 1, 2024
Homeತಾಜಾ ಸುದ್ದಿಫೆ.14 ನ್ನು ಹಸು ಅಪ್ಪುಗೆ ದಿನ ಆಚರಿಸುವ ಮನವಿಯನ್ನು ವಾಪಾಸ್ ಪಡೆದ ಕೇಂದ್ರ ಪ್ರಾಣಿ ಕಲ್ಯಾಣ...

ಫೆ.14 ನ್ನು ಹಸು ಅಪ್ಪುಗೆ ದಿನ ಆಚರಿಸುವ ಮನವಿಯನ್ನು ವಾಪಾಸ್ ಪಡೆದ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ

spot_img
- Advertisement -
- Advertisement -

ನವದೆಹಲಿ: ಫೆಬ್ರವರಿ 14 ನ್ನು ಹಸು ಅಪ್ಪುಗೆ ದಿನವನ್ನಾಗಿ ಆಚರಿಸಬೇಕು ಎಂಬ ಮನವಿಯನ್ನು ಕೇಂದ್ರದ ಪ್ರಾಣಿ ಕಲ್ಯಾಣ ಮಂಡಳಿ ಶುಕ್ರವಾರ ವಾಪಾಸ್ ಪಡೆದು ಆದೇಶ ಹೊರಡಿಸಿದೆ.

‘ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ 2023 ರ ಫೆಬ್ರವರಿ 14 ರಂದು ಗೋ ಅಪ್ಪುಗೆ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮನವಿಯನ್ನು ಹಿಂತೆಗೆದುಕೊಳ್ಳಲಾಗಿದೆ’ ಎಂದು ಪ್ರಾಣಿ ಕಲ್ಯಾಣ ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಪ್ರಾಣಿ ಕಲ್ಯಾಣ ಮಂಡಳಿ ಫೆಬ್ರವರಿ 8 ರಂದು ಹಸು ಪ್ರಿಯರಿಗೆ ಫೆಬ್ರವರಿ 14 ಅನ್ನು ‘ಹಸು ಅಪ್ಪುಗೆ ದಿನ’ ಎಂದು ಆಚರಿಸಲು ಮನವಿ ನೀಡಿತ್ತು. ಇದಕ್ಕೆ ವ್ಯಾಪಕವಾದ ವಿರೋಧ ಕೂಡ ವ್ಯಕ್ತವಾಗಿತ್ತು.ಅದರ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.

- Advertisement -
spot_img

Latest News

error: Content is protected !!