Saturday, June 6, 2026
Homeತಾಜಾ ಸುದ್ದಿಸಾರಿಗೆ ಸಚಿವರ ಮನವೊಲಿಕೆ ಸಕ್ಸಸ್; ಬೆಂಗಳೂರಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ಕೊಟ್ಟಿದ್ದ ಬಂದ್ ವಾಪಾಸ್

ಸಾರಿಗೆ ಸಚಿವರ ಮನವೊಲಿಕೆ ಸಕ್ಸಸ್; ಬೆಂಗಳೂರಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ಕೊಟ್ಟಿದ್ದ ಬಂದ್ ವಾಪಾಸ್

- Advertisement -
- Advertisement -

ಬೆಂಗಳೂರು; ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದು ಬೆಂಗಳೂರಲ್ಲಿ ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ಕೊಟ್ಟಿದ್ದ ಬಂದನ್ನು ವಾಪಾಸ್ ಪಡೆಯಲಾಗಿವೆ. ಸಾರಿಗೆ ಸಚಿವರು ಪ್ರತಿಭಟನಾ ನಿರತ ಸ್ಥಳಕ್ಕೆ ತೆರಳಿ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದ  ಹಿನ್ನಲೆಯಲ್ಲಿ ಇದೀಗ ಬೆಂಗಳೂರು ಬಂದ್ ಅನ್ನು ಖಾಸಗಿ ಸಾರಿಗೆ ಸಂಘಟನೆಗಳು ಹಿಂಪಡೆದಿದ್ದಾವೆ.

ಪ್ರತಿಭಟನಾ ನಿರತ ಸ್ಥಳಕ್ಕೆ ತೆರಳಿದ್ದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಕೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಯಾವುದಕ್ಕೂ ಲೈಸೆನ್ಸ್ ತೆಗೆದುಕೊಂಡಿಲ್ಲ. ಕಾನೂನು ಭಾಹಿರವಾಗಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಅಲ್ಲದೇ ಅನೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುತ್ತಿದ್ದಂತೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಬಂದ್ ನ್ನು ವಾಪಾಸ್ ಪಡೆದಿವೆ,.

- Advertisement -

Latest News

error: Content is protected !!