Tuesday, May 21, 2024
Homeಕರಾವಳಿಉಡುಪಿಕಾರ್ಕಳ: ಡೀಮ್ಡ್ ಫಾರೆಸ್ಟ್‌ ಪಟ್ಟಿಯಿಂದ ಕೈಬಿಟ್ಟ ಭೂಮಿ, ಬಡವರಿಗೆ ಹಾಗೂ ಸಾರ್ವಜನಿಕ ಬಳಕೆಗೆ ಬಳಸಿಕೊಳ್ಳಲಾಗುವುದು:...

ಕಾರ್ಕಳ: ಡೀಮ್ಡ್ ಫಾರೆಸ್ಟ್‌ ಪಟ್ಟಿಯಿಂದ ಕೈಬಿಟ್ಟ ಭೂಮಿ, ಬಡವರಿಗೆ ಹಾಗೂ ಸಾರ್ವಜನಿಕ ಬಳಕೆಗೆ ಬಳಸಿಕೊಳ್ಳಲಾಗುವುದು: ವಿ. ಸುನಿಲ್‌ ಕುಮಾರ್‌

spot_img
- Advertisement -
- Advertisement -

ಕಾರ್ಕಳ: ಡೀಮ್ಡ್ ಫಾರೆಸ್ಟ್‌ ಭೂಮಿಯನ್ನು ಕೈ ಬಿಡುವ ಕುರಿತು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಬಡವರಿಗೆ ನಿವೇಶನ ಕಲ್ಪಿಸಲು, ಸಾರ್ವಜನಿಕ ಬಳಕೆಗೆ ಆ ಭೂಮಿಯನ್ನು ಬಳಸಿಕೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಕಳ, ಹೆಬ್ರಿ ತಾಲೂಕುಗಳ ಕೆಡಿಪಿ ಸಭೆಯ ಅಂತ್ಯದಲ್ಲಿ ಮಾತನಾಡಿದ ಅವರು, ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಯಿಂದ ಬಡ ಜನತೆಗೆ ಸವಲತ್ತು ನೀಡುವಲ್ಲಿ ತೊಡಕಾಗಿತ್ತು. ಹಕ್ಕುಪತ್ರವಿಲ್ಲದೆ ಸೌಲಭ್ಯ ಗಳು ಸಿಗುತ್ತಿರಲಿಲ್ಲ. ಡೀಮ್ಡ್ ಫಾರೆಸ್ಟ್‌ ಪಟ್ಟಿ ಯಿಂದ ಕೈಬಿಟ್ಟ ಭೂಮಿಯನ್ನು ಇವುಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ರಾಜ್ಯ ಸರಕಾರ 6 ತಿಂಗಳಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಕೊರೊನಾ, ಪ್ರಾಕೃತಿಕ ವಿಕೋಪಗಳಿಂದ ಪ್ರಚಾರದ ಕಾರಣ ವಿಲ್ಲದೆಯೂ ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಲು ಸಾಧ್ಯವಾಗದಿರಬಹುದು. ಮುಂದಿನ ದಿನಗಳಲ್ಲಿ ಇಡೀ ಆಡಳಿತ ವ್ಯವಸ್ಥೆ ಚುರುಕುಗೊಳಿಸಬೇಕಿದೆ. ಸರಕಾರದ ಯೋಜನೆಗಳ ಅನುಷ್ಠಾನ ಜನಸಾಮಾನ್ಯರಿಗೆ ಸತಾಯಿಸದೆ ಯೋಜನೆಗಳನ್ನು ತಲುಪಿಸುವುದು ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.

ಎಲ್ಲ ಇಲಾಖೆಗಳು ಇದನ್ನು ಜಾರಿಗೊಳಿಸಬೇಕು. ಸಾರ್ವಜನಿಕ ಸೇವೆಗಳಲ್ಲಿ ಎಲ್ಲಿಯೂ ಜನಸಾಮಾನ್ಯರಿಗೆ ತೊಂದರೆಯಾಗಬಾರದು. ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಕಾಲಹರಣ ಮಾಡದಿರಿ:
ಸರಕಾರದ ಸುತ್ತೋಲೆಗಳಲ್ಲಿ ಅನುಷ್ಠಾನಕ್ಕೆ ತೊಡಕಾಗಿ ಸಮಸ್ಯೆಗಳಾದಲ್ಲಿ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾಲಹರಣ ಮಾಡಬಾರದು. ಸರಿಪಡಿಸಿಕೊಂಡು ಜನಸಾಮಾನ್ಯರಿಗೆ ಯೋಜನೆ ತಲುಪಿಸ ಬೇಕಿದೆ. ಅಧಿಕಾರಿಗಳು ಕಾಮನ್‌ಸೆನ್ಸ್‌ ನಿಂದ ಕೆಲಸ ಮಾಡಿದಾಗ ಬಡವರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯ. ಒಂದೇ ಮನೆಗೆ ಸವಲತ್ತು ತಲುಪುವುದನ್ನು ತಡೆಯಬೇಕು. ಅಧಿಕಾರಿಗಳ ಕಿಮ್ಮತ್ತಿನಿಂದ ಕೆಲವೆಡೆ ಒಂದೇ ಮನೆಗೆ ಹೆಚ್ಚು ಸವಲತ್ತುಗಳು ಹೋಗುತ್ತಿವೆೆ. ಸಾರ್ವಜನಿಕರಿಂದ ದೂರುಗಳು ಬರದೇ ರೀತಿಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಇರಬೇಕು. ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಚುರುಕು ನೀಡಲಿದ್ದೇವೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!