Wednesday, June 24, 2026
Homeಕರಾವಳಿಐಸಿಸ್ ನಂಟು ಆರೋಪದಡಿ ಎನ್ ಐಎಯಿಂದ ಬಂಧಿಸ್ಪಟ್ಟಿದ್ದ ಮಾಜಿ ಶಾಸಕ ಇದಿನಬ್ಬ ಮೊಮ್ಮಗ ಮಂಗಳೂರಿಗೆ ವಾಪಸ್

ಐಸಿಸ್ ನಂಟು ಆರೋಪದಡಿ ಎನ್ ಐಎಯಿಂದ ಬಂಧಿಸ್ಪಟ್ಟಿದ್ದ ಮಾಜಿ ಶಾಸಕ ಇದಿನಬ್ಬ ಮೊಮ್ಮಗ ಮಂಗಳೂರಿಗೆ ವಾಪಸ್

- Advertisement -
- Advertisement -

ಮಂಗಳೂರು: ಐಸಿಸ್ ಸಂಘಟನೆ ನಂಟು ಆರೋಪದಡಿ ಎನ್ ಐಎಯಿಂದ ಬಂಧಿಸಲ್ಪಟ್ಟು ಜಾಮೀನು ಪಡೆದಿರುವ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ದೆಹಲಿಯಿಂದ ಮಂಗಳೂರಿಗೆ ವಾಪಾಸಾಗಿದ್ದಾರೆ.

ಐಸಿಸ್ ನಂಟಿನ ಶಂಕಿತ ಆರೋಪಿಯಾಗಿರುವ ಅಮ್ಮರ್ ಅಬ್ದುಲ್ ರೆಹಮಾನ್ ಗೆ ಕೆಲವು ದಿನಗಳ ಹಿಂದೆ ದೆಹಲಿ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿತ್ತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಬ್ದುಲ್ ರೆಹಮಾನ್ ನನ್ನು ಕುಟುಂಬಸ್ಥರು ಸ್ವಾಗತಿಸಿದರು.2021ರ ಆಗಸ್ಟ್ ತಿಂಗಳಿನಲ್ಲಿ ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು‌ ಹೊಂದಿದ್ದ ಆರೋಪದಡಿ ಅಬ್ದುಲ್ ರೆಹಮಾನ್ ನನ್ನು ರಾಷ್ಟ್ರೀಯ ತನಿಖಾ ದಳ ಯುಎಪಿಎ ಕಾಯ್ದೆಯಡಿ ಬಂಧಿಸಿತ್ತು.

ಉಗ್ರ ಸಂಘಟನೆ ಜೊತೆಗಿನ ನಂಟು ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಕಾರಣದಿಂದ ದೆಹಲಿ ಹೈಕೋರ್ಟ್ ಕಳೆದ ವಾರ ಜಾಮೀನು ನೀಡಿತ್ತು.

- Advertisement -

Latest News

error: Content is protected !!