Sunday, May 19, 2024
Homeಕರಾವಳಿಪ್ರೊ.ಕಲಬುರ್ಗಿ ಹತ್ಯೆಯನ್ನು ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡ ಬಂಟ್ವಾಳದ ಯುವಕ ಖುಲಾಸೆ

ಪ್ರೊ.ಕಲಬುರ್ಗಿ ಹತ್ಯೆಯನ್ನು ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡ ಬಂಟ್ವಾಳದ ಯುವಕ ಖುಲಾಸೆ

spot_img
- Advertisement -
- Advertisement -

ಆರು ವರ್ಷಗಳ ಹಿಂದೆ ಖ್ಯಾತ ವಿದ್ವಾಂಸ ಮತ್ತು ಶಿಕ್ಷಣತಜ್ಞ ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ವ್ಯಕ್ತಿಯನ್ನು ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಖುಲಾಸೆ ಮಾಡಿದ್ದಾರೆ.

ಖುಲಾಸೆಗೊಂಡವರನ್ನು ಬಿ ಮೂಡ ಗ್ರಾಮದ ಮೊಡಂಕಾಪು ಪಲ್ಲಮಜಲು ನಿವಾಸಿ ಭುವಿತ್ ಅಲಿಯಾಸ್ ಭುವಿತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. 2015ರಲ್ಲಿ ಟ್ವಿಟರ್‌ನಲ್ಲಿ ಬರಹಗಾರರಾದ ಎಂ ಎಂ ಕಲಬುರ್ಗಿ ಅವರ ನಿಧನದ ಕುರಿತು ಬರಹಗಾರರಾದ ಯು ಆರ್ ಅನಂತಮೂರ್ತಿ, ಎಂ ಎಂ ಕಲಬುರ್ಗಿ ಮತ್ತು ಕೆಎಸ್ ಬಾಗವಾನ್ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.

2015ರ ಆಗಸ್ಟ್ 30ರಂದು ಸಾಹಿತಿ ಎಂ ಎಂ ಕಲಬುರ್ಗಿ ಅವರನ್ನು ಹತ್ಯೆಗೈದಿದ್ದರು. ಆಗ ಭುವಿತ್ ತಮ್ಮ ಟ್ವಿಟರ್ ಖಾತೆಯ ಮೂಲಕ ಬರಹಗಾರರಾದ ಯು ಆರ್ ಅನಂತಮೂರ್ತಿ, ಎಂಎಂ ಕಲಬುರ್ಗಿ ಮತ್ತು ಕೆಎಸ್ ಭಗವಾನ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಜಿ ತಿಮ್ಮಾಪುರ ಅವರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ಪ್ರಸಾದ್ ಕುಮಾರ್ ರೈ ಪಿ ಮತ್ತು ಶುಭಲತಾ ವಾದ ಮಂಡಿಸಿದರು.

- Advertisement -
spot_img

Latest News

error: Content is protected !!