Wednesday, May 8, 2024
Homeತಾಜಾ ಸುದ್ದಿಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ ಕಷ್ಟ

ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ ಕಷ್ಟ

spot_img
- Advertisement -
- Advertisement -

ಮದುವೆಯಾದ ನಂತರವೂ ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ, ಆ ಕಾನೂನು ವ್ಯವಸ್ಥೆ ದುರುಪಯೋಗವಾಗಲಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

ಪತ್ನಿಯ ಒಪ್ಪಿಗೆ ಅಥವಾ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಪರಿಗಣಿಸಿದಲ್ಲಿ, ಹೆಚ್ಚೆಚ್ಚು ದೂರುಗಳ ಹರಿದು ಬರಲಿದೆ ಎಂದೂ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ಜ.12ರಿಂದ ನಡೆಯುತ್ತಿದೆ. ಶುಕ್ರವಾರ ನಡೆದ ವಾದ ಮಂಡನೆ ವೇಳೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೇಂದ್ರ ಪರ ವಾದಿಸಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವ ಶಿಕ್ಷೆಯ ವ್ಯವಸ್ಥೆಯನ್ನು ಅದೇ ಮಾದರಿಯಲ್ಲಿ ದೇಶದಲ್ಲಿ ಜಾರಿಗೆ ತಂದರೆ ಪ್ರತಿಕೂಲ ಪರಿಣಾಮ ಉಂಟಾದೀತು ಎಂದು ಹೇಳಿದರು.

ವರದಕ್ಷಿಣೆ ವಿರೋಧಿಸಿ ಭಾರತೀಯ ದಂಡ ಸಹಿತೆಯ 498ರಲ್ಲಿ ಉಲ್ಲೇಖಗೊಂಡಿರುವ ಅಂಶಗಳ ದುರುಪಯೋಗವಾಗುತ್ತಿರುವ ಬಗ್ಗೆ ಮೆಹ್ತಾ ಪ್ರಸ್ತಾಪಿಸಿದ್ದಾರೆ.

- Advertisement -
spot_img

Latest News

error: Content is protected !!