Friday, June 5, 2026
Homeಕರಾವಳಿಮಂಗಳೂರು: ಪ್ರತೀ ಲೀಟರ್‌ ಹಾಲಿನ ಖರೀದಿಗೆ 1 ರೂ. ಹೆಚ್ಚಳ- ದಕ್ಷಿಣ ಕನ್ನಡ ಸಹಕಾರಿ ಹಾಲು...

ಮಂಗಳೂರು: ಪ್ರತೀ ಲೀಟರ್‌ ಹಾಲಿನ ಖರೀದಿಗೆ 1 ರೂ. ಹೆಚ್ಚಳ- ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಡಳಿಯ ಸಭೆಯಲ್ಲಿ ತೀರ್ಮಾನ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ತನ್ನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 2022 ಫೆ. 1ರಿಂದ ಅನ್ವಯವಾಗುವಂತೆ ಪ್ರತೀ ಲೀಟರ್‌ ಹಾಲಿನ ಖರೀದಿಗೆ 1 ರೂ. ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ.

ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಚೇತರಿಸಿರುವುದರಿಂದ ಹೈನುಗಾರರನ್ನು ಉತ್ತೇಜಿಸಲು ಹಾಲಿನ ಖರೀದಿ ದರವನ್ನು ಪರಿಷ್ಕರಿಸಿ, ಗುಣಮಟ್ಟದ ಪ್ರತೀ ಲೀಟರ್‌ ಹಾಲಿಗೆ ಈಗಿನ 28 ರೂ.ಗಳಿಂದ 1 ರೂ. ಏರಿಸಿ, 29 ರೂ.ಗಳಂತೆ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!