- Advertisement -
- Advertisement -
ಶ್ರೀನಗರ:ಕಾಶ್ಮೀರದ ಅನಂತ್ ನಾಗ್ ನ ಅಚಬಲ್ ಚೌಕ್ ನಲ್ಲಿ ಮೀಸಲು ಪೊಲೀಸ್ ಪಡೆ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಪೇದೆಯೊಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ
ಸಂಜೆ 6.40ರ ಸುಮಾರಿಗೆ ಉಗ್ರರು ಗ್ರೆನೇಡ್ ಗಳನ್ನು ಎಸೆದು ಸಿಆರ್ ಪಿಎಫ್ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಪೇದೆ ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಪೇದೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಗಾಯಾಳು ಯೋಧನ ಸ್ಥಿತಿ ಸಹಜವಾಗಿದೆ ಎಂದು ಸಿಆರ್ ಪಿಎಫ್ ಮೂಲಗಳು ತಿಳಿಸಿವೆ.
- Advertisement -