Saturday, May 18, 2024
Homeತಾಜಾ ಸುದ್ದಿಸೋನು ಸೂದ್ ಸಾಮಾಜಿಕ ಕಾರ್ಯಕ್ಕೆ ಫಿದಾ ಆದ ಅಭಿಮಾನಿಗಳು: ನೆಚ್ಚಿನ ನಟನಿಗಾಗಿ ದೇವಾಲಯ ನಿರ್ಮಾಣ

ಸೋನು ಸೂದ್ ಸಾಮಾಜಿಕ ಕಾರ್ಯಕ್ಕೆ ಫಿದಾ ಆದ ಅಭಿಮಾನಿಗಳು: ನೆಚ್ಚಿನ ನಟನಿಗಾಗಿ ದೇವಾಲಯ ನಿರ್ಮಾಣ

spot_img
- Advertisement -
- Advertisement -

ತೆಲಂಗಾಣ: ನಟ ಸೋನು ಸೂದ್ ತೆರೆ ಮೇಲೆ ಹೇಗೆ ಅಭಿಮಾನಿಗಳನ್ನು ಹೇಗೆ ರಂಜಿಸ್ತಾರೋ, ಹಾಗೇ ನಿಜ ಜೀವನದಲ್ಲೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಈಗಾಗಲೇ ಕೋಟ್ಯಂತರ ಮಂದಿಯ ಹೃದಯ ಗೆದ್ದಿದ್ದಾರೆ. ಇದೀಗ ಸೋನು ಅವರ ಹೃದಯ ವೈಶಾಲತೆಗೆ ಫಿದಾ ಅವರ ಅಭಿಮಾನಿಗಳು ಅವರಿಗಾಗಿ ದೇಗುಲ ನಿರ್ಮಿಸಿದ್ದಾರೆ.

ತೆಲಂಗಾಣದ ಸಿದ್ದಿಪೇಟ್ ನಲ್ಲಿರುವ ಡುಬ್ಬಾ ತಾಂಡದ ಜನತೆ ಸೋನು ಸೂದ್ ಅವರ ಕಾರ್ಯಗಳನ್ನು ಮೆಚ್ಚಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಇನ್ನು, ಸೋನು ಸೂದ್ ಅವರು ಈ ಹಿಂದೆ ಜನರಿಗೆ ಸಹಾಯ ಮಾಡಿದ ರೀತಿಗೆ ಕೇವಲ ಭಾರತ ಮಾತ್ರವಲ್ಲ, ವಿಶ್ವವೇ  ಮೆಚ್ಚುಗೆ ವ್ಯಕ್ತಪಡಿಸಿದೆ. ಅವರಿಗೆ ವಿಶ್ವಸಂಸ್ಥೆಯು ಎಸ್ ಡಿಜಿ ವಿಶೇಷ ಮಾನವೀಯ ಕ್ರಿಯೆ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟಿದೆ. ಹೀಗಾಗಿ ನಮ್ಮ ಊರಿನ ಪರವಾಗಿ ಅವರಿಗೆ ದೇವಸ್ಥಾನ ಕಟ್ಟಲು ನಿರ್ಧರಿಸಿದೆವು. ದೇವರಂತೆ ಸೋನು ಸೂದ್ ಗೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ’ ಎಂದು ಅಲ್ಲಿನ ಜನ ಹೇಳಿದ್ದಾರೆ.

ಒಟ್ಟಿನಲ್ಲಿ ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸೋನು ಸೂದ್ ಅವರನ್ನು ಸಿದ್ದಿಪೇಟ್ ಜನ ದೇವರಂತೆ ಆರಾಧಿಸುತ್ತಿದ್ದಾರೆ. ಆ ಮೂಲಕ ಸೋನು ಸೂದ್ ಕಾರ್ಯಕ್ಕೆ ಅವರು ಭಕ್ತಿಯಿಂದ ಧನ್ಯವಾದ ಅರ್ಪಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!