Monday, April 29, 2024
Homeತಾಜಾ ಸುದ್ದಿಬೊಂಡ( ಎಳೆನೀರು) ಪಾಯಸ, ನೀವೊಮ್ಮೆ ಟ್ರೈ ಮಾಡಿ..

ಬೊಂಡ( ಎಳೆನೀರು) ಪಾಯಸ, ನೀವೊಮ್ಮೆ ಟ್ರೈ ಮಾಡಿ..

spot_img
- Advertisement -
- Advertisement -

ನ್ಯೂಸ್ ಡೆಸ್ಕ್:  ಬೇಸಿಗೆ ಬಂದ್ರೆ ಸಾಕು ಹೆಚ್ಚಿನವರು ಎಳೆನೀರಿನ ಮೊರೆ ಹೋಗ್ತಾರೆ. ನೀವೆಲ್ಲಾ ಎಳೆನೀರು ಜ್ಯೂಸ್ ಕುಡಿದಿರ್ತೀರಾ. ಇದೇ ಎಳೆನೀರಿನಿಂದ ಪಾಯಸ ಕೂಡ ಮಾಡಬಹುದು. ಹೇಗೆ ಅನ್ನೋದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಎಳೆನೀರು-1

( ಗಂಜಿ ಹಾಗೂ ನೀರು ಎರಡನ್ನು ಬೇರೆ ಬೇರೆಯಾಗಿ ತೆಗೆದಿರಿಸಿ)

ದನದ ಹಾಲು-1 ಲೋಟ

ತೆಂಗಿನ ಹಾಲು-1 ಲೋಟ

ಬೆಲ್ಲ-   ¼  ಕಪ್

ದ್ರಾಕ್ಷಿ, ಗೋಡಂಬಿ, ಏಲಕ್ಕಿ

ತುಪ್ಪ( 2 ಟೇಲ್ ಸ್ಪೂನ್)

ಮಾಡುವ ವಿಧಾನ

ಮೊದಲು ಹಸುವಿನ ಹಾಲು ಹಾಗೂ ಎಳೆನೀರಿನ ನೀರನ್ನು ಪಾತ್ರೆಗೆ ಹಾಕಿ ಕುದಿಸಿಕೊಳ್ಳಬೇಕು. ಅದು ಚೆನ್ನಾಗಿ ಕುದಿದ ಬಳಿಕ ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಅದನ್ನು ಕುದಿಸಬೇಕು.ಬಳಿಕ ಬೆಲ್ಲ ಹಾಕಬೇಕು. ಬೆಲ್ಲ ಚೆನ್ನಾಗಿ ಕರಗಿದ ಬಳಿಕ ಎಳೆನೀರಿನ ಗಂಜಿ ಹಾಕಿ ಸುಮಾರು 5 ನಿಮಿಷದಷ್ಟು ಬೇಯಿಸಬೇಕು. ಬಳಿಕ ಏಲಕ್ಕಿ ಹಾಕಬೇಕು. ಕೊನೆಗೆ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಹಾಕಿದರೆ ರುಚಿಯಾದ ಎಳೆನೀರು ಪಾಯಸ ಕುಡಿಯಲು ಸಿದ್ಧವಾಗುತ್ತದೆ. ನೀವೂ ಎಳೆನೀರು ಪಾಯಸವನ್ನು ಟ್ರೈಂ ಮಾಡಿ, ಹೇಗಾಯ್ತು ಅಂತಾ ಕಮೆಂಟ್ ಮಾಡಿ ತಿಳಿಸಿ.

- Advertisement -
spot_img

Latest News

error: Content is protected !!