Friday, May 3, 2024
HomeUncategorizedಕಾರ್ಕಳ; ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿ; ಓರ್ವ ಸಾವು, ಐವರಿಗೆ ಗಾಯ

ಕಾರ್ಕಳ; ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿ; ಓರ್ವ ಸಾವು, ಐವರಿಗೆ ಗಾಯ

spot_img
- Advertisement -
- Advertisement -

ಕಾರ್ಕಳ; ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಸಾವನ್ನಪ್ಪಿ ಐವರಿಗೆ ಗಾಯಗಳಾಗಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕಡಾರಿ ಕ್ರಾಸ್‌ನಲ್ಲಿ ನಡೆದಿದೆ.

ಹೆಜಮಾಡಿಯಿಂದ ಮಾಳದೆಡೆಗೆ ತೆಂಗಿನಕಾಯಿ ಸಾಗಿಸುತ್ತಿದ್ದ ವೇಳೆ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ .

ಪರಿಣಾಮವಾಗಿ ಐವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಓರ್ವ ಮೃತಪಟ್ಟಿರುತ್ತಾರೆ.ಟೆಂಪೋದಲ್ಲಿ ಚಾಲಕ ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!