Thursday, June 4, 2026
HomeUncategorizedಮಂಗಳೂರು; ಪ್ರೀತಿಸುತ್ತಿದ್ದ ಹುಡುಗಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಯುವಕ: ವಿಚಾರ ಗೊತ್ತಾಗಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಇನ್ನೋರ್ವ...

ಮಂಗಳೂರು; ಪ್ರೀತಿಸುತ್ತಿದ್ದ ಹುಡುಗಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಯುವಕ: ವಿಚಾರ ಗೊತ್ತಾಗಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಇನ್ನೋರ್ವ ಗೆಳೆಯ

- Advertisement -
- Advertisement -

ಮಂಗಳೂರು; ಪ್ರೀತಿಸುತ್ತಿದ್ದ ಹುಡುಗಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಯುವಕನಿಗೆ ಇನ್ನೋರ್ವ ಯುವಕ ಸ್ನೇಹಿತರೊಂದಿಗೆ ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳಾಗಿರುವ ಯುವಕರು ಹುಡುಗಿ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು, ಒಬ್ಬ ಯುವಕನಿಗೆ ಮುಖದಲ್ಲಿ ರಕ್ತ ಹರಿಯುವಂತೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಟ್ಟೋಡಿ ನಿವಾಸಿ ಯುವಕ ತಾನು ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಪದೇ ಪದೇ ಹಣ ಕೇಳಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಯುವತಿ ತನ್ನ ನೀರುಮಾರ್ಗದ ಗೆಳೆಯನಿಗೆ ವಿಷಯ ತಿಳಿಸಿದ್ದಳು. ವಿಷಯ ತಿಳಿದ ಯುವಕ ಐದಾರು ಮಂದಿ ಯುವಕರ ಜೊತೆಗೆ ಕಾರಿನಲ್ಲಿ ನೀರುಮಾರ್ಗಕ್ಕೆ ಬಂದು ಯುವಕನನ್ನು ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ತಡರಾತ್ರಿಯಲ್ಲಿ ಪಾಲ್ದಾನೆ ಎಂಬಲ್ಲಿ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇನ್ನು  ಹೊಡೆದಾಟದ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಡುಗರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಬ್ಬ ಯುವಕ ಕಳೆದ ವರ್ಷ ಡಿಗ್ರಿ ಪೂರೈಸಿದ್ದರೆ, ಹಲ್ಲೆ ನಡೆಸಿದ ಯುವಕ ಈ ಸಲ ಅಂತಿಮ ಪದವಿಯಲ್ಲಿದ್ದಾನೆ. ಇನ್ನು ಎರಡೂ ಕಡೆಯ ಕುಟುಂಬಸ್ಥರು ಕಂಕನಾಡಿ ಗ್ರಾಮಾಂತರ ಠಾಣೆಗೆ ಬಂದು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ.

- Advertisement -

Latest News

error: Content is protected !!