Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿ; ನೀರಿನೊಂದಿಗೆ ಒಳ ನುಗ್ಗಿದ ಮಣ್ಣಿನ ರಾಶಿ

ಬೆಳ್ತಂಗಡಿ: ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿ; ನೀರಿನೊಂದಿಗೆ ಒಳ ನುಗ್ಗಿದ ಮಣ್ಣಿನ ರಾಶಿ

- Advertisement -
- Advertisement -

ಬೆಳ್ತಂಗಡಿ: ಮಳೆಯ ತೀವ್ರತೆಗೆ ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲಿ ಸಂಭವಿಸಿದೆ.

ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿ ಮತ್ತು ಸುತ್ತು ಪೌಳಿಗೆಗೆ ಮಣ್ಣು ಕುಸಿದ ಪರಿಣಾಮ ತೀವ್ರ ಹಾನಿಯಾಗಿದೆ.ಏಕಾಏಕಿ‌ ಗುಡ್ಡ ಕುಸಿದು ಬಿದ್ದಿದ್ದು ಭಾರೀ ಪ್ರಮಾಣದ ನೀರಿನೊಂದಿಗೆ ಮಣ್ಣಿನ ರಾಶಿ ಕೂಡಾ ದೇವಸ್ಥಾನದ ಒಳಗೆ ನುಗ್ಗಿದೆ.

ಮಳೆ ಇನ್ನಷ್ಟು ಹೆಚ್ಚಾದರೆ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ.

- Advertisement -

Latest News

error: Content is protected !!