Sunday, October 18, 2026
Homeಕರಾವಳಿಮಂಗಳೂರುಬಂಟ್ವಾಳ: ಫಲ್ಗುಣಿ ನದಿಯಲ್ಲಿ ಏರಿಕೆಯಾದ ನೀರು; ಅಮ್ಮುಂಜೆ ಗ್ರಾಮ, ದೇವಸ್ಥಾನ ಜಲಾವೃತ

ಬಂಟ್ವಾಳ: ಫಲ್ಗುಣಿ ನದಿಯಲ್ಲಿ ಏರಿಕೆಯಾದ ನೀರು; ಅಮ್ಮುಂಜೆ ಗ್ರಾಮ, ದೇವಸ್ಥಾನ ಜಲಾವೃತ

- Advertisement -
- Advertisement -

ಬಂಟ್ವಾಳ: ಸತತವಾಗಿ ಸುರಿದ ಮಳೆಯಿಂದಾಗಿ ಫಲ್ಗುಣಿ ನದಿ ಉಕ್ಕಿ ಹರಿದಿದ್ದು, ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಜಲಾವೃತಗೊಂಡಿದೆ.

ಅಮ್ಮುಂಜೆ ಗ್ರಾಮದ ಹಲವು‌ ಮನೆಗಳಿಗೆ ನದಿ ನೀರು ನುಗ್ಗಿದ್ದು, ಜನರನ್ನು ಮನೆಗಳಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ರಸ್ತೆಯ ಮೇಲೆ ನದಿ ನೀರು ತುಂಬಿರುವ ಕಾರಣ ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.ಇದೇ ವೇಳೆ, ಅಮ್ಮುಂಜೆಯ ಸೋಮನಾಥೇಶ್ವರ ದೇವಸ್ಥಾನ ಕೂಡಾ ನೀರಿನಿಂದ ಆವೃತವಾಗಿದ್ದು, ದೇವಸ್ಥಾನದ ಒಳಭಾಗಕ್ಕೆ ನದಿ ನೀರು ನುಗ್ಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದೆ.

- Advertisement -

Latest News

error: Content is protected !!