Thursday, June 25, 2026
Homeಕರಾವಳಿಮಣ್ಣು ತೆರವುಗೊಳಿಸಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಶಿರಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ

ಮಣ್ಣು ತೆರವುಗೊಳಿಸಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಶಿರಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ

- Advertisement -
- Advertisement -

ಹಾಸನ : ಸದ್ಯಕ್ಕೆ ದಕ್ಷಿಣನ್ನಡ ಜಿಲ್ಲೆಯ ಮಂದಿಗೆ ಬೆಂಗಳೂರು , ಹಾಸನ ಕಡೆಯಿಂದ ಪ್ರಯಾಣಿಸಬೇಕಾದರೆ ರಸ್ತೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಾಡಿ ಘಾಟ್ ನಲ್ಲಿ ಪದೇ ಪದೇ ಭೂ ಕುಸಿತವಾಗುತ್ತಿದ್ದು ನಿನ್ನೆ ಸಂಜೆ ಭೂ ಕುಸಿತ ಆದ ಜಾಗದಲ್ಲೇ ಮತ್ತೆ ಕುಸಿತವಾಗಿದೆ.

ಮಣ್ಣು ತೆರವುಗೊಳಿಸಿ ಕೆಲವೇ ನಿಮಿಷಗಳಲ್ಲಿ  ಮತ್ತೆ ಭೂ ಕುಸಿತವಾಗಿದ್ದು ರಸ್ತೆ ಕ್ಲೋಸ್ ಆಗಿದೆ.ಸಕಲೇಶಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ ದೊಡ್ಡತಪ್ಪಲೆ ಬಳಿ ಇಂದು ಭೂಕುಸಿತ ಸಂಭವಿಸಿದ್ದು ಸಂಚಾರ ಸ್ಥಗಿತವಾಗಿದೆ.

ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಮತ್ತೆ ಸಂಚಾರ ನಿಷೇಧಗೊಂಡಿದೆ.ಶಿರಾಡಿ ಘಾಟ್‌ನಲ್ಲಿ ಕುಸಿತ ಉಂಟಾಗಿದ್ದರಿಂದ ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!