Tuesday, May 14, 2024
Homeಕರಾವಳಿಕಾಸರಗೋಡುವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಶಿಕ್ಷಕರಿಬ್ಬರ ಬಂಧನ

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಶಿಕ್ಷಕರಿಬ್ಬರ ಬಂಧನ

spot_img
- Advertisement -
- Advertisement -

ಕೇರಳ: ವಿದ್ಯಾರ್ಥಿಗಳನ್ನು ತಿದ್ದಿ, ಬುದ್ಧಿ ಹೇಳಿ ಸರಿ ದಾರಿಯಲ್ಲಿ ನಡೆಸಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳನ್ನು ಅಡ್ಡ ದಾರಿಗೆ ಕೊಂಡೊಯ್ದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ದೈಹಿಕ ಶಿಕ್ಷಕಿ , ಶಿಕ್ಷಕ ಹಾಗ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವನಂತರಪುರಂನ ಮುತ್ತಥರಾ ಪ್ರದೇಶದ ಶಿವಶಕ್ತಿ ಹೌಸ್ನ ದೈಹಿಕ ಶಿಕ್ಷಕಿ ಅಮೃತಾ (24), ಥಿರುವಳ್ಳ ಮೂಲಕ ದೈಹಿಕ ಶಿಕ್ಷಕ ಅಭಿಮನ್ಯು (27) ಮತ್ತು ಪೆರಿಂತಲಮನ್ನದ ಕಪ್ಪಿಲ್ ಹೌಸ್ನ ಸನಿಲ್ (27) ಬಂಧಿತರು.

ರಹಸ್ಯ ಮಾಹಿತಿ ಮೇರೆಗೆ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ (ಡಿಎಎನ್ಎಸ್ಎಎಫ್) ಮತ್ತು ಇನ್ಫೋಪಾರ್ಕ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಂಬಿಕಾರ್ಹ ವ್ಯಕ್ತಿಗಳಿಗೆ ಮಾತ್ರ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 20 ಗ್ರಾಂ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ. ಡ್ರಗ್ಸ್ ಅನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

- Advertisement -
spot_img

Latest News

error: Content is protected !!