Thursday, June 4, 2026
Homeಕರಾವಳಿಕೆಎಸ್ ಆರ್ ಟಿಸಿ ಬಸ್ ಚಾಲಕರಾದ ಶಾಸಕ ಯು ಟಿ ಖಾದರ್

ಕೆಎಸ್ ಆರ್ ಟಿಸಿ ಬಸ್ ಚಾಲಕರಾದ ಶಾಸಕ ಯು ಟಿ ಖಾದರ್

- Advertisement -
- Advertisement -

ಮಂಗಳೂರು: ಶಾಸಕ ಯು ಟಿ ಖಾದರ್ ಇಂದು ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಆಗಿದ್ದರು. ತಾವೇ ಬಸ್ ಓಡಿಸಿ ಜನ ಹುಬ್ಬೇರಿಸುವಂತೆ ಮಾಡಿದ್ರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು ಗ್ರಾಮದ ಪಾಣೇಲ ನಾಗರೀಕರು ಬಹಳ ಸಮಯಗಳಿಂದ ಸರಕಾರಿ ಬಸ್‌ ಗಾಗಿ ಬೇಡಿಕೆ ಸಲ್ಲಿಸಿದ್ದರು ಸಾರಿಗೆ ಇಲಾಖೆಗೆ ಶಾಸಕ ಯು.ಟಿ. ಖಾದರ್ ಬಸ್ಸು ಒದಗಿಸಿ ಎಂದು ಸೂಚನೆ ನೀಡಿದಾಗ ರಸ್ತೆಯಲ್ಲಿ ದೊಡ್ಡ ಬಸ್ಸು ಸಂಚರಿಸುವ ಅವಕಾಶ ಇಲ್ಲದಿದ್ದರಿಂದ ಪಾಣೇಲ ಜನತೆಯ ಬಸ್ಸಿನ ಕನಸು ನನಸಾಗಿಯೇ ಉಳಿದಿತ್ತು.

ಇದೀಗ ಶಾಸಕ ಯುಟಿ ಖಾದರ್‌ ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮಚಾವಡಿ – ಪಜೀರು – ಪಾಣೇಲ-ಪಡೀಲ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಮತ್ತೆ ಸಾರಿಗೆ ಇಲಾಖೆಗೆ ಬಸ್ಸು ಒದಗಿಸಲು ಸೂಚನೆ ನೀಡಿದ್ದಾರೆ. ಅದರಂತೆ ಸಾರಿಗೆ ಇಲಾಖೆಯು ಬಸ್ಸು ಒದಗಿಸಿದೆ. ಇದನ್ನು ಸ್ವತಃ ಮಾಜಿ ಸಚಿವ ಯುಟಿ ಖಾದರ್ ಅವರು ಚಲಾಯಿಸಿ ಉದ್ಘಾಟನೆ ಮಾಡಿದ್ದಾರೆ.

- Advertisement -

Latest News

error: Content is protected !!