Friday, June 26, 2026
Homeಕರಾವಳಿಉಡುಪಿಉಡುಪಿ: ಕಾರಿಗೆ ಸ್ಕೂಟರ್ ಡಿಕ್ಕಿ, ಶಿಕ್ಷಕಿ ಸಾವು

ಉಡುಪಿ: ಕಾರಿಗೆ ಸ್ಕೂಟರ್ ಡಿಕ್ಕಿ, ಶಿಕ್ಷಕಿ ಸಾವು

- Advertisement -
- Advertisement -

ಉಡುಪಿ: ಕಾರಿಗೆ ಸ್ಕೂಟರ್ ಡಿಕ್ಕಿಯಾಗಿ, ಶಿಕ್ಷಕಿ ಸಾವನ್ನಪ್ಪಿರುವ ಘಟನೆ ಮೂಡಬಿದಿರೆಯ ರಾಜ್ಯ ಹೆದ್ದಾರಿಯ ಶಿರ್ತಾಡಿ ಸೇತುವೆ ಬಳಿಯಲ್ಲಿ ನಡೆದಿದೆ. ಮೂಡಬಿದಿರೆಯ ನಾಗರಕಟ್ಟೆಯ ನಿವಾಸಿಯಾಗಿದ್ದು, ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಸುಜಯ ಭಂಡಾರಿ (35) ಮೃತ ದುರ್ದೈವಿ.

ಸುಜಾತ ಶುಕ್ರವಾರ ಸಂಜೆ ವೇಳೆಗೆ ತನ್ನ ಕರ್ತವ್ಯ ಮುಗಿಸಿ ಮೂಡಬಿದಿರೆ ನಾಗರಕಟ್ಟೆಯಲ್ಲಿರುವ ಮನೆಗೆ ಆಕ್ವಿವಾದಲ್ಲಿ ಹೋಗುತ್ತಿದ್ದರು. ಶಿರ್ತಾಡಿ ಸೇತುವೆ ಬಳಿ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಾರು ಏಕಾಏಕಿಯಾಗಿ ಆಕ್ವಿವಾಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ‌ ದೂರಕ್ಕೆ ತಳ್ಳಲ್ಪಟ್ಟ ಸವಾರೆ,ಶಿಕ್ಷಕಿ ಗಂಭೀರ ವಾಗಿ ಗಾಯಗೊಂಡಿದ್ದರು.

ಅವರ ತಲೆಭಾಗಕ್ಕೆ ತೀವ್ರ ಗಾಯಗೊಂಡಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಮೃತ ಶಿಕ್ಷಕಿಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗಿಬ್ಬರು ಅವಳಿ ಜವಳಿ ಮಕ್ಕಳಿದ್ದು ಮೂಡಬಿದಿರೆ ಶಾಲೆಯಲ್ಲಿ ಓದುತ್ತಿದ್ದಾರೆ.‌ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!