Friday, June 5, 2026
Homeಇತರನಿನ್ನೆ ತೆಲಂಗಾಣ, ಇಂದು ಈ ರಾಜ್ಯದಲ್ಲಿ SSLC ಪರೀಕ್ಷೆ ರದ್ದು..!

ನಿನ್ನೆ ತೆಲಂಗಾಣ, ಇಂದು ಈ ರಾಜ್ಯದಲ್ಲಿ SSLC ಪರೀಕ್ಷೆ ರದ್ದು..!

- Advertisement -
- Advertisement -

ಚೆನ್ನೈ: ನಿನ್ನೆಯಷ್ಟೇ ತೆಲಂಗಾಣ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದುಗೊಳಿಸಿತ್ತು. ಇದೀಗ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡು ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

10 ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಿ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಜೊತೆಗೆ ಹತ್ತು ಮತ್ತು 11 ನೇ ತರಗತಿ ವಿದ್ಯಾರ್ಥಿಗಳು ನೇರವಾಗಿ ಪಾಸ್ ಆಗಿ ಮುಂದಿನ ತರಗತಿಗೆ ತೇರ್ಗಡೆ ಹೊಂದಲಿದ್ದಾರೆ.

ತಮಿಳುನಾಡಿನಲ್ಲಿ ಕೊರೋನಾ ವೈರಸ್ ತಾರಕಕ್ಕೇರಿದ್ದು, ಒಂದೊಂದು ದಿನದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುವಷ್ಟು ಏರಿಕೆಯಾಗಿದೆ..

ನಿನ್ನೆ ಒಂದೇ ದಿನ ದೇಶದಲ್ಲಿ 9,987 ಕೇಸ್ ಗಳು ದಾಖಲಾಗಿದೆ. ಶೇ,48.47 ಪ್ರಮಾಣದ ರೋಗಿಗಳು ಗುಣಮುಖರಾಗಿದ್ದಾರೆ

- Advertisement -

Latest News

error: Content is protected !!