Wednesday, June 3, 2026
Homeಕರಾವಳಿಮಂಗಳೂರು ಮಂಗಳೂರು: ರೌಡಿ ಶೀಟರ್ ಮೇಲೆ ತಲವಾರು ದಾಳಿ

 ಮಂಗಳೂರು: ರೌಡಿ ಶೀಟರ್ ಮೇಲೆ ತಲವಾರು ದಾಳಿ

- Advertisement -
- Advertisement -

ಸುರತ್ಕಲ್: ರೌಡಿ ಶೀಟರ್ ಒಬ್ಬಾತನ ಮೇಲೆ ತಲವಾರು ದಾಳಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ ಸುರತ್ಕಲ್ ನಲ್ಲಿ ನಡೆದಿದೆ.

ಸುರತ್ಕಲ್ ನ ಕುಳಾಯಿ ವೈನ್ಸ್ ಬಳಿ ನಿನ್ನೆ ರಾತ್ರಿ 8.30ರ ವೇಳೆಗೆ ರೌಡಿ ಶೀಟರ್ ಭರತ್ ಶೆಟ್ಟಿ ಎಂಬಾತನ ಮೇಲೆ ತಲವಾರು ದಾಳಿ ನಡೆದಿದೆ ಎನ್ನಲಾಗಿದೆ.ಘಟನೆ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ರೌಡಿ ಶೀಟರ್ ಭರತ್ ಶೆಟ್ಟಿ ನೀಡಿರುವ ದೂರಿನ ಪ್ರಕಾರ ದೀಕ್ಷಿತ್ ಶೆಟ್ಟಿ ಕೈಕಂಬ ಮತ್ತು ಶೈಲೇಶ್ ಕೈಕಂಬ ಇತರ ಮೂವರ ಜೊತೆಗೆ ಸೇರಿ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಭರತ್ ಶೆಟ್ಟಿ ವಿರುದ್ಧ ಪಾಂಡೇಶ್ವರ ಮತ್ತು ಸುರತ್ಕಲ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿದ್ದು, ವೈಯಕ್ತಿಕ ಕಾರಣಗಳಿಗಾಗಿ ನಿನ್ನೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!