Friday, June 5, 2026
Homeಕರಾವಳಿಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿ; ತಾಯಿ ,ಅಣ್ಣನಿಗೂ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು!

ಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿ; ತಾಯಿ ,ಅಣ್ಣನಿಗೂ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು!

- Advertisement -
- Advertisement -

ಮಂಗಳೂರು: ಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು, ದಾಳಿಗೊಳಗಾದವರು. ಇವರ ಮೇಲೆ ಭಜರಂಗದಳದ ಕಾರ್ಯಕರ್ತರಾದ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ತಲವಾರು ಸಹಿತ ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ.

ಈ ವೇಳೆ ತಡೆಯಲು ಬಂದ ಪ್ರಕಾಶ್ ರ ತಾಯಿ ಮತ್ತು ಅಣ್ಣನಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾರಣಾಂತಿಕವಾಗಿ ದಾಳಿಗೊಳಗಾದ ಪ್ರಕಾಶ್ ಬೆಳ್ಳೂರು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

- Advertisement -

Latest News

error: Content is protected !!