Sunday, June 7, 2026
Homeಕರಾವಳಿಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿವೆ ಎಂದ ಭಾಗೀರಥಿ ಮುರುಳ್ಯ; ಹಾಲಿ ಶಾಸಕಿಗೆ...

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿವೆ ಎಂದ ಭಾಗೀರಥಿ ಮುರುಳ್ಯ; ಹಾಲಿ ಶಾಸಕಿಗೆ ವೇದಿಕೆಯಲ್ಲಿ ಭಾಷಣದ ಮೂಲಕ ಉತ್ತರಕೊಟ್ಟ ಮಾಜಿ ಶಾಸಕ ಎಸ್ ಅಂಗಾರ

- Advertisement -
- Advertisement -

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿಯಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ವೇದಿಕೆಯಲ್ಲಿ ಭಾಷಣದ ಮೂಲಕವೇ ಮಾಜಿ ಶಾಸಕ ಎಸ್ ಅಂಗಾರ ಉತ್ತರಕೊಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸುಳ್ಯ ಶಾಸಕಿ ಅಬಿವೃದ್ದಿಯಾಗಿಲ್ಲ,ಕುಗ್ರಾಮವಾಗಿಯೇ ಉಳಿದಿದೆ, ಎಲ್ಲಾ ಗ್ರಾಮಗಳಲ್ಲಿಯೂ ಸಾಕಷ್ಟು ಅಭಿವೃದ್ಧಿ ಬೇಡಿಕೆಗಳು ಇನ್ನೂ ಇದೆ ಎಂದು ಹೇಳಿದ್ದರು.
ಇದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸಿದ ಮಾಜಿ ಸಚಿವ ಎಸ್.ಅಂಗಾರ ದಕ್ಷಿಣ ಕನ್ನಡ ಜಿಲ್ಲೆಯ ಇತರ ಯಾವುದೇ ಕ್ಷೇತ್ರಗಳಲ್ಲಿ ಆಗಿರುವುದಕ್ಕಿಂತ ಹೆಚ್ಚಿನ ಅಭಿವೃದ್ಧಿ ಸುಳ್ಯ ಕ್ಷೇತ್ರದಲ್ಲಿ ಆಗಿದೆ. ಇದನ್ನು ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಧ ಎಂದು ಹೇಳಿದರು. 1994ಕ್ಕಿಂತ ಮೊದಲು ಸುಳ್ಯ ಕ್ಷೇತ್ರ ಯಾವ ರೀತಿ ಇತ್ತು, ಆ ಬಳಿಕ ಎಷ್ಟು ಅಭಿವೃದ್ಧಿ ಆಗಿದೆ ಎಂಬುದು ಎಲ್ಲರ ಮುಂದಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅತೀ ಹೆಚ್ಚಿನ ಅನುದಾನ ಬಂದಿದೆ.‌ ಎಲ್ಲಾ ಸರಕಾರಗಳೂ ತನಗೆ ಅನುದಾನ ನೀಡಿದೆ ಎಂದ ಅವರು ತನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಕಿ ಅಂಶಗಳ ಸಮೇತ ಸಾಬೀತು ಮಾಡಲು ಸಿದ್ಧ, ಅಭಿವೃದ್ಧಿ ಆಗಿಲ್ಲ ಎಂದು ಹೇಳುವವರಿಗೆ ಈ ಅಂಕಿ ಅಂಶಗಳೇ ಉತ್ತರ ಎಂದು ತಿರುಗೇಟು ಕೊಟ್ಟಿದ್ದಾರೆ.

- Advertisement -

Latest News

error: Content is protected !!