Wednesday, June 24, 2026
Homeತಾಜಾ ಸುದ್ದಿಮಂಡ್ಯದಲ್ಲಿ ಇಂದು ಸುಮಲತಾ ನಿರ್ಧಾರ; ಕಮಲ-ದಳದ ಚಿತ್ತ ಮಂಡ್ಯದ ಸಭೆಯತ್ತ..!

ಮಂಡ್ಯದಲ್ಲಿ ಇಂದು ಸುಮಲತಾ ನಿರ್ಧಾರ; ಕಮಲ-ದಳದ ಚಿತ್ತ ಮಂಡ್ಯದ ಸಭೆಯತ್ತ..!

- Advertisement -
- Advertisement -

ಬೆಂಗಳೂರು: ಕಮಲ-ದಳ ಮೈತ್ರಿ ಟಿಕೆಟ್ ಕುಮಾರಸ್ವಾಮಿಗೆ ದೊರೆತಿರುವ ಮನಸ್ತಾಪದ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತು ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಬಿ ವೈ ವಿಜಯೇಂದ್ರ ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಅಸಮಾಧಾನ ಶಮನಗೊಳಿಸುವ ಯತ್ನ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಹೇಳದೇ ಬೆಂಬಲಿಗರ ಜೊತೆ ಮಾತನಾಡುವುದಾಗಿ ತಿಳಿಸಿದ್ದರು.

ವಿಜಯೇಂದ್ರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಶನಿವಾರ ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಸಭೆ ಬಳಿಕ ನಿರ್ಧಾರ ಪಕ್ರಟಿಸುವುದಾಗಿ ಹೇಳಿದ್ದಾರೆ. ನನ್ನ ನಿಲುವನ್ನು ಮಂಡ್ಯದಲ್ಲೇ ತಿಳಿಸುವೆ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!