Sunday, June 28, 2026
Homeಕರಾವಳಿಬಂಟ್ವಾಳ: ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ: ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಬಂಟ್ವಾಳ: ಅಂಗಡಿಗೆ ತೆರಳಿದ್ದ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ‌ ಬಿಮೂಡಾ ಗ್ರಾಮದಲ್ಲಿ ನಡೆದಿದೆ. ಕಳ್ಳಿಗೆ ಗ್ರಾಮದ  ಧರ್ಮರಾಜ್ ಯಾನೆ ಧರ್ಮ (40) ಬಂಧಿತ ಆರೋಪಿ.

ಟೈಲರ್ ಆಗಿರುವ ಈತ ಅಂಗಡಿಗೆ ಬಂದಿದ್ದ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಲಾಗಿದೆ.  ಜುಲೈ 8ರಂದು ಈ‌ ಘಟನೆ ನಡೆದಿದ್ದು, ಈತನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜುಲೈ 8ರ ಸಂಜೆ ಅಂಗಡಿಗೆ ತೆರಳಿದ್ದ ಬಾಲಕಿಯೊಂದಿಗೆ ಆರೋಪಿ ಧರ್ಮ, ʼನಿನಗೆ ಹೊಸ ಇಸ್ತ್ರಿ ಪೆಟ್ಟಿಗೆ ತೋರಿಸುತ್ತೇನೆ‌ ಒಳಗೆ ಬಾʼ ಎಂದು ಪಕ್ಕದಲ್ಲೇ ಇದ್ದ ತನ್ನ ಟೈಲರ್ ಅಂಗಡಿಯೊಳಕ್ಕೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಮನೆಗೆ ತೆರಳಿದ ಬಾಲಕಿ ಈ ವಿಚಾರವನ್ನು ತಿಳಿಸಿದ್ದಾಳೆ ಎಂದು ಬಾಲಕಿಯ ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ‌.

ಘಟನೆ ಸಂಬಂಧಿಸಿ ಬಾಲಕಿಯ ಪೋಷಕರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ರಾತ್ರಿಯೇ ಬಂಧಿಸಿದ್ದಾರೆ. ಅಲ್ಲದೇ ಪೋಷಕರು ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ‌.

- Advertisement -

Latest News

error: Content is protected !!