Monday, June 8, 2026
Homeಕರಾವಳಿಮಂಗಳೂರುಮಂಗಳೂರು : ಚಡ್ಡಿ ಗ್ಯಾಂಗ್ ನಿಂದ ಮನೆ ದರೋಡೆ ಪ್ರಕರಣ:ಮೂವರನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಮಂಗಳೂರು : ಚಡ್ಡಿ ಗ್ಯಾಂಗ್ ನಿಂದ ಮನೆ ದರೋಡೆ ಪ್ರಕರಣ:ಮೂವರನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು

- Advertisement -
- Advertisement -

ಮಂಗಳೂರಿನ ಹಲವು ಕಡೆ ಕಳ್ಳತನ, ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರು ಹಾಗೂ ಜನ ಸಾಮಾನ್ಯರ ನಿದ್ದೆ ಕೆಡಿಸಿದ್ದ ಶಂಕಿತ ಚಡ್ಡಿ ಗ್ಯಾಂಗ್ ನ ಮೂವರನ್ನು ಪೊಲೀಸರು ಸಕಲೇಶಪುರದಲ್ಲಿ ವಶಕ್ಕೆ ಪಡೆದಿದ್ದಾರೆ .

ಘಟನೆ ಬಳಿಕ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ತಾಂತ್ರಿಕ ಹಾಗೂ ನಾಕಾ ಬಂಧಿ ಹಾಕಿದ ಬಳಿಕ ಖಚಿತ ಮಾಹಿತಿ ಮೇರೆಗೆ ಮೊದಲು ಪಾಂಡೇಶ್ವರದಲ್ಲಿ ವಶಕ್ಕೆ ಪಡೆದ ಬಳಿಕ ಇಬ್ಬರನ್ನು ಹಾಸನದ ಸಕಲೇಶಪುರದಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರಿಗೆ ಕರೆತರುತ್ತಿದ್ದಾರೆ.ಮೂವರು ಕೂಡ ಉತ್ತರ ಭಾರತದ ಆರೋಪಿಗಳು ಎನ್ನಲಾಗಿದೆ.


ಇಂದು ನಸುಕಿವನ ಜಾವ ಮಂಗಳೂರಿನ ಕೋಟೆಕಣಿಯಲ್ಲಿ ಮನೆ ಮಂದಿಗೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿ ಅದೇ ಮನೆಯ ಕಾರಿನಲ್ಲಿ ಮುಲ್ಕಿಯವರೆಗೆ ಹೋಗಿದ್ದ ದರೋಡೆಕೋರರು ಅಲ್ಲಿಂದ ಮಂಗಳೂರಿಗೆ ಬಸ್ ನಲ್ಲಿ ಬಂದು ಬಳಿಕ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಸಕಲೇಶಪುರದಲ್ಲಿ ವಶಕ್ಕೆ ಪಡೆಯಲಾಗಿದೆ .

ಇನ್ನು ಈ ಗ್ಯಾಂಗ್ ಚಡ್ಡಿ ಮತ್ತು ಬನಿಯಾನ್ ಧರಿಸಿ ಕಳ್ಳತನ, ದರೋಡೆ ನಡೆಸುವ ತಂಡವಾಗಿದ್ದು ರಾಜಸ್ಥಾನ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸೇರಿದವರು ಈ ಗ್ಯಾಂಗ್ ನಲ್ಲಿ ಇದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!