Friday, April 19, 2024
Homeತಾಜಾ ಸುದ್ದಿಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ್ ಇನ್ನು ನೆನಪು ಮಾತ್ರ

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ್ ಇನ್ನು ನೆನಪು ಮಾತ್ರ

spot_img
- Advertisement -
- Advertisement -

ಬೆಂಗಳೂರು: ಬಹುಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ್ (73) ನಿಧನರಾದರು.ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ಸೊಲಬಕ್ಕನವರ್ ಕಲೆ, ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ‘ಅಣುಶಕ್ತಿ ಯುದ್ಧ ನಿಲ್ಲಿಸಿ’ ಎಂಬ 120 ಅಡಿ ಉದ್ದದ ತೈಲ ವರ್ಣಚಿತ್ರದ ಮೂಲಕ ನಾಡಿನಾದ್ಯಂತ ಸುತ್ತಾಟ ನಡೆಸಿದ್ದರು.ದೊಡ್ಡಾಟದಲ್ಲಿನ ತಮ್ಮ ಅಪರಿಮಿತ ಒಲವಿನಿಂದ ಇವರು ಸರ್ಕಾರಿ ಶಿಕ್ಷಕ ವೃತ್ತಿಯನ್ನೇ ತೊರೆದು ಪೂರ್ಣಪ್ರಮಾಣದಲ್ಲಿ ದೊಡ್ಡಾಟದಲ್ಲಿ ತೊಡಗಿಸಿಕೊಂಡಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸೊಲಬಕ್ಕನವರ್ ಶಿಗ್ಗಾವಿಯ ಗೊಟಗೋಡಿಯಲ್ಲಿನ ಉತ್ಸವ ರಾಕ್‌ ಗಾರ್ಡನ್‌ ನೇತಾರರಾಗಿದ್ದರು.ಇವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕದ ನ್ಯೂ ವರ್ಕ್ ಶಾಪ್ ನಲ್ಲಿ ಜರುಗಲಿದೆ.ಮೃತರು ಪತ್ನಿ ,ಪುತ್ರಿ, ಪುತ್ರ ಹಾಗು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.ಇವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಪ್ರಶಸ್ತಿ ನೀಡಿತ್ತು.

- Advertisement -
spot_img

Latest News

error: Content is protected !!