Saturday, June 6, 2026
Homeತಾಜಾ ಸುದ್ದಿಮಳಲಿ ಮಸೀದಿ ಉತ್ಖನನ ನಡೆಸಲು ಅರ್ಜಿ ಸಲ್ಲಿಕೆಯ ಸಾಧ್ಯತೆ: ಕಾನೂನು ಹೋರಾಟಕ್ಕೆ ಮುಂದಾಗುತ್ತಾರಾ ಜಂಗಮ ಮಠದ...

ಮಳಲಿ ಮಸೀದಿ ಉತ್ಖನನ ನಡೆಸಲು ಅರ್ಜಿ ಸಲ್ಲಿಕೆಯ ಸಾಧ್ಯತೆ: ಕಾನೂನು ಹೋರಾಟಕ್ಕೆ ಮುಂದಾಗುತ್ತಾರಾ ಜಂಗಮ ಮಠದ ಸ್ವಾಮೀಜಿ?

- Advertisement -
- Advertisement -

ಮಂಗಳೂರು: ವಿವಾದಿತ ಮಳಲಿ ಮಸೀದಿ ಉತ್ಖನನ ನಡೆಸಲು ಮಂಗಳೂರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ತಾಂಬೂಲ ಪ್ರಶ್ನೆ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಸೀದಿ ವಿವಾದ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ಗುರುಪುರದ ವೀರಶೈವ ಜಂಗಮ ಮಠದ ಸ್ವಾಮೀಜಿ ಕಾನೂನು ಹೋರಾಟಕ್ಕೆ ಸಾಥ್ ನೀಡಿದ್ದು, ವಿಶ್ವಹಿಂದೂ ಪರಿಷತ್ ಹೋರಾಟಕ್ಕೆ ಗುರುಪುರದ ಜಂಗಮ ಮಠ ಸಾಥ್ ನೀಡಿದೆ. ವಿಎಚ್ ಪಿ ಕಾನೂನು ಹೋರಾಟಕ್ಕೆ ಬಲ ತಂದ ಜಂಗಮ ಮಠದ ರುದ್ರಮುನಿ ಸ್ವಾಮೀಜಿ, ಮಸೀದಿ ಉತ್ಖನನ ಮತ್ತು ಮಸೀದಿ ಜಾಗದ ಸತ್ಯಾಸತ್ಯತೆ ಪರಿಶೀಲನೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಗುರುಪುರ ಜಂಗಮ ಮಠಕ್ಕೆ ನಿನ್ನೆ ಭೇಟಿ ನೀಡಿ ಸ್ವಾಮೀಜಿ ಜೊತೆ ವಿಎಚ್ ಪಿ ಮುಖಂಡರು ಚರ್ಚಿಸಿದ್ದು, ಮಠದ ಇತಿಹಾಸ ಮತ್ತು ಮುಂದಿನ ಹೋರಾಟಕ್ಕೆ ಬೆಂಬಲ ಕೇಳಿದ್ದರು. ಈಗಾಗಲೇ ಮಂಗಳೂರು ಕೋರ್ಟ್ ನಲ್ಲಿ ವಿಎಚ್ ಪಿ ಅರ್ಜಿ ವಿಚಾರಣೆಯಲ್ಲಿದ್ದು, ಇದೇ ವಿವಾದ ಸಂಬಂಧ ಮಠದ ವತಿಯಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಲಿದೆ. ಗುರುಪುರ ಮಠದ ಸ್ವಾಮೀಜಿಯಿಂದ ವಿವಾದ ಸಂಬಂಧ ಅರ್ಜಿ ಸಲ್ಲಿಕೆಯಾಗಲಿದೆ. ಗುರುಪುರ ಜಂಗಮ ಮಠಕ್ಕೆ ಮಳಲಿ ಮಠ ಸೇರಿದೆ ಎನ್ನಲಾಗಿದ್ದು, ತಾಂಬೂಲ ಪ್ರಶ್ನೆಯಲ್ಲೂ ಮಸೀದಿ ಜಾಗದಲ್ಲಿ ಶಿವ ಸಾನಿಧ್ಯ ಇದ್ದ ಬಗ್ಗೆ ಮಾಹಿತಿ ಇತ್ತು. ಗುರುಪುರ ಮಠದ ಪುಸ್ತಕದಲ್ಲೂ ಮಳಲಿಯಲ್ಲಿ ವೀರಶೈವ ಮಠ ಇದ್ದ ಬಗ್ಗೆ ಮಾಹಿತಿ ಇದ್ದು, ಹೀಗಾಗಿ ಮಠದ ನೆರವು ಪಡೆದು ಹೋರಾಟಕ್ಕೆ ಮುಂದಾಗಿದೆ ವಿಹೆಚ್‌ಪಿ.

- Advertisement -

Latest News

error: Content is protected !!