Thursday, May 9, 2024
Homeಕರಾವಳಿಬೆಳ್ತಂಗಡಿ : ಕಳೆಂಜ ಮೀಸಲು ಅರಣ್ಯ ಪ್ರದೇಶದ ಜಾಗದ ತಕರಾರು ಪ್ರಕರಣ: ಇಂದಿನಿಂದ 8,474 ಎಕ್ರೆ...

ಬೆಳ್ತಂಗಡಿ : ಕಳೆಂಜ ಮೀಸಲು ಅರಣ್ಯ ಪ್ರದೇಶದ ಜಾಗದ ತಕರಾರು ಪ್ರಕರಣ: ಇಂದಿನಿಂದ 8,474 ಎಕ್ರೆ ಜಾಗದ ಜಂಟಿ ಸರ್ವೆ ಆರಂಭ

spot_img
- Advertisement -
- Advertisement -

ಬೆಳ್ತಂಗಡಿ : ಕಳೆಂಜ ಗ್ರಾಮದ ಅಮ್ಮಿನಡ್ಕ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆಯ ಫೌಂಡೇಷನ್ ನಿರ್ಮಿಸುವ ಬಗ್ಗೆ ದೂರಿನ‌ ಮೇರೆಗೆ ಅ.6 ರಂದು ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದರು.

ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅ.7 ರಂದು ಮತ್ತೆ ಮನೆಯನ್ನು ನಿರ್ಮಿಸಲಾಗಿತ್ತು.ಈ ಬಗ್ಗೆ ಹಿರಿಯ ಅರಣ್ಯ ಇಲಾಖೆಯ ಸೂಚನೆ ಮೇರೆಗೆ ಮನೆ ತೆರವುಗೊಳಿಸಲು ಧರ್ಮಸ್ಥಳ ಪೊಲೀಸರ ಸಹಕಾರದಲ್ಲಿ ಅ.9 ರಂದು ಕಾರ್ಯಚರಣೆಗೆ ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ದ.ಕ ಜಿಲ್ಲೆಯ ಎಲ್ಲಾ ಶಾಸಕರು ಸ್ಥಳಕ್ಕೆ ದೌಡಾಯಿಸಿ ಮನೆ ತೆರವಿಗೆ ವಿರೋಧ ವ್ಯಕ್ತಪಡಿಸಿದರು.ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಮಂಗಳೂರು ಡಿಎಫ್ಒ ಆಂಟೋನಿ ಮರಿಯಪ್ಪ ಬಂದು ಶಾಸಕರರುಗಳ ಜೊತೆ ಮಾತುಕತೆ ನಡೆಸಿ ಈ ಪ್ರದೇಶ ಅರಣ್ಯ ಇಲಾಖೆಗೆ  ಸೇರಿದ್ದು ಎಂದು ಮನವರಿಕೆ ಮಾಡಿದರೂ ಮನೆ ತೆರವಿಗೆ ಅವಕಾಶ ನೀಡಲಿಲ್ಲ. ಕೊನೆಗೆ ಡಿಎಫ್ಒ ಸಂಜೆ ವೇಳೆಗೆ ಶಾಸಕರುಗಳ ಜೊತೆ ಮತ್ತೆ ಮಾತುಕತೆ ನಡೆಸಿ ಜಂಟಿ ಸರ್ವೆ ನಡೆಸಲು ಒಪ್ಪಿಗೆ ಸೂಚಿಸಿ. ಸರ್ವೆ ಪೂರ್ತಿಯಾದ ಬಳಿಕ ಅರಣ್ಯ ಇಲಾಖೆಗೆ ಆ ಜಾಗ ಬಂದ್ರೆ ಮನೆ ತೆರವು ಮಾಡಲು ಬದ್ದ ಎಂದು ಬೆಳ್ತಂಗಡಿ ಶಾಸಕರಿಂದ ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆಸಿ ಪ್ರಕರಣ ಸುಖಾಂತ್ಯಗೊಳಿಸಲಾಯಿತು.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309/1 ರಲ್ಲಿ ಅರಣ್ಯ ಇಲಾಖೆಯ ನೋಟಿಫಿಕೇಶನ್ ಅನುಸಾರ ವಿವರ ಹೇಳುವುದಾದರ, ನೋಟಿಫಿಕೇಶನ್ ಅನುಸಾರ ಮಿಯಾರು ಮೀಸಲು ಅರಣ್ಯ – 6389.39 ಎಕ್ರೆ . ನೋಟಿಫಿಕೇಶನ್ ಅನುಸಾರ ನಿಡ್ಲೆ ಮೀಸಲು ಅರಣ್ಯ – 998.50 ಎಕ್ರೆ ಸೇರಿ ಒಟ್ಟು *7,387.89* ಎಕ್ರೆ ಜಾಗ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಗೆ ಸೇರಿದೆ.

ಒಟ್ಟು ಸರ್ವೆಯ ಜಾಗದ ವಿವರ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309/1 ರಲ್ಲಿ ಆಕಾರಬಂದ್ ನಂತೆ ಒಟ್ಟು ವಿಸ್ತೀರ್ಣ 8,474.50 ಎಕ್ರೆ. ಪ್ರಸ್ತುತ ಪಹಣೆಯಂತೆ ಒಟ್ಟು ವಿಸ್ತೀರ್ಣ 8,474.50 ಎಕ್ರೆ. ಸರಕಾರದ (ಕಲಂ 11 ರಲ್ಲಿ ಸುರಕ್ಷಿತ ಕಾಡು) – 7588.30.50 ಎಕ್ರೆ. ಅರಣ್ಯ ಇಲಾಖೆ(ನಿಡ್ಲೆ ಸುರಕ್ಷಿತ ವಿಸ್ತೃತ ಬ್ಲಾಕು) – 335.25 ಎಕ್ರೆ .‌ ಅರಣ್ಯ ಇಲಾಖೆ- 315.16 ಎಕ್ರೆ. ಅರಣ್ಯ ಇಲಾಖೆ( ಮಿಯಾರು ಸುರಕ್ಷಿತ ವಿಸ್ತೃತ ಬ್ಲಾಕು) – 201.15 ಎಕ್ರೆ. ಪಹಣೆಯಲ್ಲಿ ಪ್ರಸ್ತುತ ನಮೂದಿತ ಮಂಜೂರಿದಾರರ ವಿಸ್ತೀರ್ಣ – 34.63.50 ಎಕ್ರೆ ಸೇರಿ ಒಟ್ಟು 8,474.50 ಎಕ್ರೆ ಒಂಟಿ ಸರ್ವೆ ನಡೆಸಲಾಗುತ್ತದೆ.

ಸರ್ವೆಗೆ ಎರಡು ತಿಂಗಳು: ಈ ಜಾಗದ ಸರ್ವೆಗೆ ಸರಿಸುಮಾರು ಎರಡು ತಿಂಗಳು ಸರ್ವೆ ಕೆಲಸ ಮಾಡಲು ಸಮಯ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಪವಾದಪ್ಪ ದೊಡ್ಡಮನಿ(ಕಂದಾಯ ನಿರೀಕ್ಷಕರು),ಪೃಥ್ವಿರಾಜ್‌ ಪಿ ಶೆಟ್ಟಿ (ಗ್ರಾಮ ಆಡಳಿತ ಅಧಿಕಾರಿ),ಯತಿಂದ್ರ ( ಗ್ರಾಮ ಸಹಾಯಕ),ಭೂಮಾಪನ ಇಲಾಖೆಯ ರೇಣುಕಾ ನಾಯ್ಕ್( ADLR),ರಮೇಶ್,ಗುರುನಾಥ್ ( ಭೂಮಾಪಕರು) ಮತ್ತು ಉಪ್ಪಿನಂಗಡ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ಮತ್ತು ಸಿಬ್ಬಂದಿಗಳು ಕಳೆಂಜ 309 ಸರ್ವೆ ನಂಬರಿನಲ್ಲಿ ಜಂಟಿ ಸರ್ವೆ ಆರಂಭಿಸಿದ್ದಾರೆ.

- Advertisement -
spot_img

Latest News

error: Content is protected !!