Saturday, June 6, 2026
Homeಕರಾವಳಿಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ; ಆರೋಪಿ ಆನಂದ ಆಚಾರ್ಯ ಬಂಧನ ;...

ಬೆಳ್ತಂಗಡಿ : ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆ; ಆರೋಪಿ ಆನಂದ ಆಚಾರ್ಯ ಬಂಧನ ; ವೇಣೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಆಕ್ಟೋಬರ್ 10 ರಂದು ಸಂಜೆ ಮಹಾಮಸ್ತಕಾಭಿಷೇಕದ ಪ್ರಯುಕ್ತ  ಜಿನ‌ ಭಜನಾ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾಗ ವ್ಯಕ್ತಿಯೊರ್ವ ಸ್ಥಳಕ್ಕೆ ತೆರಳಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, ಮಚ್ಚು ತೋರಿಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮುಂಡೂರಿನ ಆನಂದ ಆಚಾರ್ಯ (38) ಎಂಬಾತನು  ಅಕ್ಟೊಬರ್ 10 ರಂದು ಸಂಜೆ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆಸುತ್ತಿದ್ದರು,ಪ್ರವಾಸಿಗರು ಕೂಡ ಇದ್ದರು. ಈ ಸಂದರ್ಭ ಅಲ್ಲಿಗೆ ತೆರಳಿ ಮಚ್ಚು ತೋರಿಸಿ,  ಬೊಬ್ಬೆ ಹಾಕಿ ಬೆದರಿಕೆ ಹಾಕಿದ್ದು ಕೂಡಲೇ ಸ್ಥಳಿಯರು ವೇಣೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೋಲೀಸರು ಆಗಮಿಸಿ ಮಚ್ಙನ್ನು ವಶಪಡಿಸಿಕೊಂಡು.ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!