Wednesday, June 24, 2026
Homeತಾಜಾ ಸುದ್ದಿಕೇಂದ್ರ ಸಚಿವರಾದ ಬಳಿಕ ಆದಾಯ ಕುಸಿತ; ಸಚಿವ ಸ್ಥಾನ ತ್ಯಜಿಸಿ ಮತ್ತೆ ಚಿತ್ರರಂಗಕ್ಕೆ ಮರಳಲು ಮುಂದಾದ...

ಕೇಂದ್ರ ಸಚಿವರಾದ ಬಳಿಕ ಆದಾಯ ಕುಸಿತ; ಸಚಿವ ಸ್ಥಾನ ತ್ಯಜಿಸಿ ಮತ್ತೆ ಚಿತ್ರರಂಗಕ್ಕೆ ಮರಳಲು ಮುಂದಾದ ನಟ ಸುರೇಶ್ ಗೋಪಿ

- Advertisement -
- Advertisement -

ಕಣ್ಣೂರು: ಕೇಂದ್ರ ಸಚಿವ ಮತ್ತು ಮಲಯಾಳಂ ಚಲನಚಿತ್ರ ನಟ ಸುರೇಶ್ ಗೋಪಿ ಸಚಿವ ಸ್ಥಾನ ತ್ಯಜಿಸಿ ಚಿತ್ರರಂಗಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರಾದ ಬಳಿಕ ತಮ್ಮ ಆದಾಯದಲ್ಲಿ ಗಣನೀಯವಾಗಿ ಕುಸಿತವಾಗಿರುವ ಹಿನ್ನಲೆಯಲ್ಲಿ ಚಿತ್ರರಂಗಕ್ಕೆ ಮರಳಲು ಚಿಂತನೆ ನಡೆಸಿರುವ ಬಗ್ಗೆ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುರೇಶ್ ಗೋಪಿ ಹೇಳಿಕೊಂಡಿದ್ದಾರೆ.

ಮತ್ತೆ ಚಿತ್ರರಂಗಕ್ಕೆ ಮರಳಲು ಉದ್ದೇಶಿಸಿರುವ ಕಾರಣ ತಮ್ಮ ಸಚಿವ ಸ್ಥಾನವನ್ನು ರಾಜ್ಯಸಭಾ ಸದಸ್ಯ ಸದಾನಂದನ್ ಅವರಿಗೆ ನೀಡುವಂತೆ ಸುರೇಶ್ ಗೋಪಿ ಮನವಿ ಮಾಡಿದ್ದಾರೆ.

ಕೇರಳದ ಏಕೈಕ ಬಿಜೆಪಿ ಲೋಕಸಭಾ ಸದಸ್ಯರಾಗಿರುವ ಸುರೇಶ್ ಗೋಪಿ ಹಾಲಿ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Latest News

error: Content is protected !!