Thursday, June 4, 2026
Homeಕರಾವಳಿಸುರತ್ಕಲ್: ಕೆರೆಯಲ್ಲಿ ಮುಳುಗಿ ಕೃಷ್ಣಾಪುರದ ಯುವಕ ಮೃತ್ಯು

ಸುರತ್ಕಲ್: ಕೆರೆಯಲ್ಲಿ ಮುಳುಗಿ ಕೃಷ್ಣಾಪುರದ ಯುವಕ ಮೃತ್ಯು

- Advertisement -
- Advertisement -

ಸುರತ್ಕಲ್: ಕೆರೆಯಲ್ಲಿ ಈಜಲು ತೆರಳಿದ್ದ ಸ್ಥಳೀಯ ಯುವಕನೋರ್ವ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೃಷ್ಣಾಪುರ ನೈತಂಗಡಿ ಎಂಬಲ್ಲಿ ಇಂದು ನಡೆದಿದೆ.

ಮೃತ ಯುವಕನನ್ನು ಸ್ಥಳೀಯ ನಿವಾಸಿ ತಾರನಾಥ್ ಎಂಬವರ ಪುತ್ರ ಸಂತೋಷ್ ದೇವಾಡಿಗ (22) ಎಂದು ಗುರುತಿಸಲಾಗಿದೆ.

ಸಂತೋಷ್ ಸ್ನೇಹಿತರ ಜೊತೆ ಇಂದು ಮಧ್ಯಾಹ್ನ ಕೃಷ್ಣಾಪುರ ಬಳಿಯ ಕೆರೆಯಲ್ಲಿ ಈಜಲು ತೆರಳಿದ್ದರು. ಸಂತೋಷ್ ಮುಳುಗುವುದನ್ನು ಕಂಡು ಸ್ನೇಹಿತರು ಬೊಬ್ಬೆ ಹೊಡೆದಿದ್ದು ಸ್ಥಳೀಯರು ಸ್ಥಳಕ್ಕಾಗಮಿಸಿ ರಕ್ಷಿಸಲು ಯತ್ನಿಸಿದರೂ ಬದುಕುಳಿಸಲಾಗಲಿಲ್ಲ.

ಈತ ಪ್ರಸ್ತುತ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಡಿಪ್ಲೋಮಾ ಪದವಿ ಓದುತ್ತಿದ್ದ. ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮೃತ ಶವವನ್ನು ಮಹಜರು ನಡೆಸಿದ್ದಾರೆ.

- Advertisement -

Latest News

error: Content is protected !!